Clickable Image

Wednesday, January 22, 2025

ಕೂಲಿಕಾರ್ಮಿಕರ ಮೇಲಿನ ಹಲ್ಲೆ ಅಮಾನುಷ್ಯ! ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ-ನಿಂಗರಾಜ ಕಟ್ಟಿಮನಿ

 ಕೂಲಿಕಾರ್ಮಿಕರ ಮೇಲಿನ ಹಲ್ಲೆ ಅಮಾನುಷ್ಯ! ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ-ನಿಂಗರಾಜ ಕಟ್ಟಿಮನಿ



ಕಲಬುರಗಿ: ವಿಜಯಪುರ ಜಿಲ್ಲೆಯ ಹೊರವಲಯದಲ್ಲಿ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದ ಮಾದಿಗ ಸಮಾಜದ ಬಡ ಕೂಲಿಕಾರ್ಮಿಕರು ಇಟ್ಟಂಗಿ ಬಟ್ಟಿ ಕೆಲಸಕ್ಕೆ ಹೋಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆಂದು ಸ್ವ ಗ್ರಾಮಕ್ಕೆ ತೆರಳಿದ ಅವರು ಒಂದು ದಿನ ತಡವಾಗಿ ಬಂದಿದ್ದಕ್ಕೆ ಇಟ್ಟಂಗಿ ಬಟ್ಟಿ ಮಾಲೀಕ ಹಾಗೂ ಸಂಗಡಿಗರು ಸೇರಿ ಮನಬಂದಂತೆ ಮನಸೋ ಇಚ್ಚೆ ಹಲ್ಲೆ ನಡಿಸಿದ್ದಾರೆ.ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಸುದ್ಸಿಗಾರರೊಂದಿಗೆ ಮಾತನಾಡಿದ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಿಂಗರಾಜ ಕಟ್ಟಿಮನಿ ಚಿಕ್ಕಲಕಿ ಗ್ರಾಮದ ಮಾದಿಗ ಸಮಾಜದ ಬಡ ಕೂಲಿ ಕಾರ್ಮಿಕರಾದ ಉಮೇಶ ಮಾದರ,ಸದಾಶಿವ ಮಾದರ,ಸದಾಶಿವ ಬಬಲಾದಿ ಅವರು ವಿಜಯಪುರ ನಗರದ ಹೊರವಲಯದಲ್ಲಿರುವ ಖೇಮು ರಾಠೋಡ ಅವರಿಗೆ ಸೇರಿದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು,ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಸ್ವ-ಗ್ರಾಮಕ್ಕೆ ತೇರಳಿದ್ದಾರೆ.ಮರಳಿ ಬರುವುದು ಕೇವಲ ಒಂದು ದಿನ ತಡವಾಗಿದ್ದಕ್ಕೆ ಮೂರು ದಿನ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.ಖೇಮು ರಾಠೋಡ,ಸಚಿನ ಮಾನವರ,ವಿಶಾಲ ಜುಮನಾಳ,ಕನಕಮೂರ್ತಿ ಗೊಂದಳಿ,ರೋಹನ ರಾಠೋಡ ಸೇರಿ ಮಾದಿಗ ಸಮಾಜದ ಬಡ ಕೂಲಿಕಾರ್ಮಿಕರ ಮೇಲೆ ರಾಕ್ಷಸ ಪ್ರವೃತ್ತಿ ತೋರಿದ್ದಾರೆ. ಹಲ್ಲೆ ನಡೆದಿರುವುದಕ್ಕೆ ವಿಡಿಯೋ ಸಾಕ್ಷ್ಯ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂತಹ ನೀಚ ಮನಸ್ಸಿನ ದುರುಳರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾರ್ಮಿಕರ ಮೇಲೆ ಈ ರೀತಿಯ ಹಲ್ಲೆಗಳು ಮಾನವ ಕುಲವೇ ತಲೆತಗ್ಗಿಸುವಂತಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಮತ್ತು ಮನುಷ್ಯರು ಮನುಷ್ಯತ್ವ ಮರೆತು ರಾಕ್ಷಸ ಪ್ರವೃತ್ತಿ ತೋರುವ ಹೀನ ಮನಸ್ಸಿನವರಿಗೆ ಕಾನೂನಿನ್ವಯ ಘನಘೋರ ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

Whatsapp Button works on Mobile Device only