Clickable Image

Thursday, January 23, 2025

ಬೀದರ್ ಜಿಲ್ಲೆಯ ಮೊದಲ ಮಹಿಳಾ ಛಾಯಾ ಗ್ರಾಹಕಿ ಶ್ರೀಮತಿ ಸುನಿತಾ ಆನಂದ್ ಅವರಿಗೆ ಗೌರವ ಸನ್ಮಾನ!

 *ಶ್ರೀಮತಿ ಸುನೀತಾ ಆನಂದ (ಬೀದರ ಜಿಲ್ಲೆಯ ಮೊದಲ ಮಹಿಳಾ ಛಾಯಗ್ರಾಹಕಿ)ಅವರಿಗೆ ಗೌರವ ಸನ್ಮಾನ.





ಒಂದು ಕಾಲದಲ್ಲಿ ಛಾಯಗ್ರಹಣ ವೃತ್ತಿ ಲಾಭದಾಯಕ ವೃತ್ತಿಯಾಗಿತ್ತು, ಸ್ಟುಡಿಯೋ ಮಾಲೀಕರು ಮತ್ತು ಅಲ್ಲಿ ನೌಕರಿ ಮಾಡುವ ಛಾಯಾಗ್ರಾಹಕರು ವೃತ್ತಿ ನಂಬಿ ಜೀವನ ಸಾಗಿಸುತಿದ್ದರು. ಆದರೆ ಪ್ರಸ್ತುತ ಸಂಧರ್ಭದಲ್ಲಿ ಸ್ಮಾರ್ಟ್ಫೋನ್ ಯುಗದಲ್ಲಿ ಅಕ್ಷರಸಹ *ಸ್ಮೈಲ್ ಪ್ಲೀಸ್* ಎಂದು ಬೇರೊಬ್ಬರ ಮುಖದಲ್ಲಿ ಸದಾ ನಗುವನ್ನು ಮೂಡಿಸುವ ಛಾಯಗ್ರಾಕರ ಬದುಕು ಅತ್ಯಂತ ದುಸ್ತರವಾಗಿದೆ.


ಛಾಯಗ್ರಾಹಕರು ಅತ್ಯಂತ ತಾಳ್ಮೆಯ ವ್ಯಕ್ತಿಗಳು, ನಮ್ಮೆಲರ ಸಂತೋಷದ ಕ್ಷಣಗಳನ್ನು ಕ್ಲಿಕೀಸಿ ನಮಗಿಂತ ಹೆಚ್ಚು ಖುಷಿಯನ್ನು ಸಂಭ್ರಮಿಸುವರು.


ಫೋಟೋ ಗ್ರಾಫಿ ಎಂಬುದು ಎಲ್ಲ ಕಲೆಗಳಂತೆ ಛಾಯಾಗ್ರಹಣವು ಕೂಡ ಒಂದು ಕಲೆ, ಇಂತಹ ಕಲೆಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ *ಛಾಯಾಗ್ರಾಹಕರ ಸಂಘ ಮತ್ತು ಶ್ರೀ ಭಾಲ್ಕೆಶ್ವರ ಫೋಟೋಗ್ರಾಫರ್ ಅಸೋಷಿಯೇನರವರು ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭದಲ್ಲಿ ಸುಮಾರು ಹತ್ತು ವರುಷದಿಂದ ಬೀದರ ಮೊದಲ ಮಹಿಳಾ ಛಾಯಾಗ್ರಾಹಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುನಿತಾ ಆನಂದರವರಿಗೆ ಸನ್ಮಾನ ಗೌರವ ನೀಡಿರುವುದು ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ನಾಡೋಜ ಡಾ!!ಬಸವಲಿಂಗ ಪಟ್ಟದೇವರು (ಅಧ್ಯಕ್ಷರು ಅನುಭವ ಮಂಟಪ ಬಸವ ಕಲ್ಯಾಣ) ಶ್ರೀ ಸಾಗರ ಖಂಡ್ರೆ ( ಸಂಸದರು ಲೋಕಸಭಾ ಕ್ಷೇತ್ರ ಬೀದರ್) ಶ್ರೀಮತಿ. ಶಶಿಕಲಾ ಅಶೋಕ ಸಿಂದನಕೆರಾ (ಅಧ್ಯಕ್ಷರು ನಗರ ಸಭೆ ಭಾಲ್ಕಿ.) ಶ್ರೀ ಎಚ್. ಎಸ್. ನಾಗೇಶ್ ( ಅಧ್ಯಕ್ಷರು ಕೆ. ಪಿ. ಎ. ಬೆಂಗಳೂರು. ) ಶ್ರೀ ಮಂಜುನಾಥ ಮೆತ್ರೆ. (ಅಧ್ಯಕ್ಷರು ಕೆ. ಪಿ. ಎ. ಭಾಲ್ಕಿ) ಶ್ರೀ ಸಂತೋಷ ಸೋನಾಲೆ (ಕಾರ್ಯದರ್ಶಿಕೆ. ಪಿ. ಎ. ಭಾಲ್ಕಿ)  

ಶ್ರೀ ಪವನ್ ಸಿಂಗ್ ಠಾಕೂರ್ (ಅಧ್ಯಕ್ಷರು ಕೆ. ಪಿ. ಎ. ಬೀದರ್)ಶ್ರೀ ಮಂಜುನಾಥ ಹತ್ಗುಂದಿ (ನಿರೀಕ್ಷಕರು ಕಾರ್ಮಿಕ ಇಲಾಖೆ ಭಾಲ್ಕಿ)

ಜಿಲ್ಲಾ ಹಾಗೂ ತಾಲ್ಲೂಕು  

ಛಾಯಾಗ್ರಾಹಕರು ಅಪಾರ ಸಂಖ್ಯೆಯಲ್ಲಿ ಸೇರಿದರು 

 ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಓಂಕಾರ ಪಾಟೀಲ, ಸಂಗಮೇಶ ಜಾoತೆ ವೀರಭದ್ರಪ್ಪ ಉಪ್ಪಿನ ಡಾ. ಎಂ. ಜಿ. ದೇಶಪಾಂಡೆ, ಅರವಿಂದ ಕುಲಕರ್ಣಿ ವರದಿಗಾರ ಆನಂದ ಮುಂತಾದವರು ಹರುಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೊರಿದ್ದಾರೆ.

Post a Comment

Whatsapp Button works on Mobile Device only