ತೊಗರಿ ಬೇಳೆಗೆ ಪರಿಹಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ 22 ರಂದು ಕಲಬುರಗಿ ಬಂದ
ಕಲಬುರಗಿ :ತೊಗರಿಯ ನಾಡು, ಕಲಬುರಗಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ತೇವಾಂಶ ಕೊರತೆಯಿಂದ ಒಣಗಿದ ತೊಗರಿಗೆ ಪರಿಹಾರಕ್ಕಾಗಿ,ಬೆಳೆ ವಿಮೆ ಮಂಜೂರು ಮಾಡಲು
MSP ಬೆಂಬಲ ಬೆಲೆ ನಿಗದಿ ಪಡಿಸಲು, ಆಗ್ರಹಿಸಿ,, ರೈತರ ಸಾಲ ಮನ್ನಕ್ಕಾಗಿ,, ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರದ 1000 ರೂ ಪ್ರೋತ್ಸಾಹ ಧನ ಕೊಡಬೇಕು.ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಅವರ್ಥ ನಿಧಿ 500 ರೂ ಕೊಡಬೇಕು, ಹೀಗೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 22/1/2025 ರಂದು ಕಲಬುರಗಿ ಬಂದಗೆ ಕರೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣ ಸುದ್ದಿಗೋಷ್ಠಿಯಲ್ಲಿ ಹೇಳಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮಹಾಂತೇಶ್ ಜಮಾದಾರ ಕಲಬುರಗಿಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ.ಒಂದೆಡೆ ಬರ, ಇನ್ನೊಂದಡೆ ನೆರೆ.ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ.ಕಲಬುರಗಿ ಜಿಲ್ಲೆಯ ತೊಗರಿ ಬಿತ್ತನೆ 6.06884 ಹೆಕ್ಟೇರ್ ಮಾಡಿದ ತೊಗರಿ ಸರಾಸರಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಒಣಗಿ ಹೋಗಿದೆ ತೊಗರಿ ಕಣಜ ಎಂದು ಏಷ್ಯಾ ಖಂಡದಲ್ಲಿ ಪ್ರಸಿದ್ಧ ವಾಗಿದೆ ತೊಗರಿ ನಾಡಿನಲ್ಲಿ ಈ ವರ್ಷ ರೈತರು, ರಸ ಗೊಬ್ಬರ ಬೆಲೆ, ಬಿಜದ ಬೆಲೆ, ಔಷಧಿ ಬೆಲೆ ಗಗನಕ್ಕೆರಿದೆ, ಬಿತ್ತಿದ್ದು ಬುಕ್ಕದ ಆಳು, ಸದಿ ಎಡಿ ಔಷಧಿ ಸಿಂಪರಣೆ ಮಾಡಿದ್ದು ಲಾಗೊಡಿ ಮಾಡಿದ ರೈತರು ಒಳ್ಳೆಯ ಬಂಪರ್ ಬೆಳೆ ಬೆಳೆದು ನಿಂತಿದ್ದ ನೆನಿ,ಹೂ,ಬೆಳ್ಳಿ,ಕಾಯಿ ಕಚ್ಚುವ ಸಮಯದಲ್ಲಿ ತೆಂವಾಂಶ ಕೊರತೆಯಿಂದ ಉ ಒಣಗಿಹೊದ ತೊಗರಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ಸಿಕ್ಕಾಪಟ್ಟಿ ಲಾಗೊಡಿ ಮಾಡಿದ ಸಾಲ ತೀರಿಸಲು ಆಗದೆ ತೊಗರಿ ಬೆಳೆಗಾರರು ಕಂಗಾಲಾಗಿದ್ದಾರೆ.ರೈತರ ಹೈರಾಣು ತಪ್ಪುತ್ತಿಲ್ಲ.ರಾಜ್ಯದ ತೊಗರಿ ಕಣಜ ಕಲಬುರಗಿಯಲ್ಲಿ ತೊಗರಿ ಬೆಳೆಗಾರರ ಹಿತಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ತೊಗರಿ ಖರೀದಿಯೂ ನಡೆಸದೆ, ಹೊಸ ತಳಿ ಅಭಿವೃದ್ಧಿಯನ್ನೂ ಮಾಡದೆ ತೊಗರಿ ಮಂಡಳಿ ಇದ್ದೂ ಇಲ್ಲದಂತಾಗಿದೆ. 20 ವರ್ಷಗಳಲ್ಲಿ ಸಿಕ್ಕಿದ್ದು ಕೇವಲ 5 ಕೋಟಿ ರೂ.ಮಾತ್ರ ಆರಂಭದಲ್ಲಿ ಅನುದಾನ ನೀಡಿದ್ದು ಬಿಟ್ಟರೆ ಈಗ ಹಣವೇ ನೀಡಿಲ್ಲ, ಈಗ ತೊಗರಿ ಮಂಡಳಿಯಿಂದ ತೊಗರಿ ಖರೀದಿಯೂ ಇಲ್ಲ,ತೊಗರಿ ಮಂಡಳಿ ಅನಾಥವಾಗಿದೆ. ತೊಗರಿ ಹೊಸ ತಳಿ ಅಭಿವೃದ್ಧಿಯೂ ಇಲ್ಲ. ಅನುದಾನ ಇಲ್ಲದೇ ಬಳಲುತ್ತಿರುವ ಮಂಡಳಿಯು ರೈತರ ಪಾಲಿಗೆ ಸತ್ತಂತಾಗಿದೆ.5 ಕೋಟಿ ರೂ.ಗಳ ಷೇರು ಹಣವನ್ನು ಹೂಡಿ 2002ರಲ್ಲಿ ನೀಡಿ ತೊಗರಿ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಯಿತು. ಅದು 2007ರಲ್ಲಿ ಕಾರ್ಯಾರಂಭ ಮಾಡಿದೆ. ಆರಂಭದಲ್ಲಿ ನೀಡಿದ ಈ ಮೊತ್ತ ಹೊರತುಪಡಿಸಿದರೆ ಯಾವ ರಾಜ್ಯ ಸರಕಾರ ಇದುವರೆಗೆ ನಯಾಪೈನೆ ಹಣ ನೀಡಿಲ್ಲ. ಇದು ಮಂಡಳಿ ಬಗ್ಗೆ ತಾತ್ಸಾರ ಮತ್ತು ತೊಗರಿ ಬೆಳೆಗಾರರಿಗೆ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ರೈತರುಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತವಾದಾಗ ಮಂಡಳಿ ಮಾರುಕಟ್ಟೆ ಪ್ರವೇಶಿಸಿ ತೊಗರಿ ಖರೀದಿಸುತ್ತಿತ್ತು. ಆದರೆ ಕ್ರಮೇಣ ತೊಗರಿ ಖರೀದಿ ಏಜೆನ್ಸಿಯಾಗಿ ನಾಫೆಡ್‌ಗೆ ನೀಡಿದ್ದರಿಂದ ಮಂಡಳಿ ಇದ್ದೂ ಇಲ್ಲದಂತಾಯಿತು. ಹೆಸರಿಗೆ ಮಾತ್ರ ಉಪ ಎಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಇದು ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಏನೂ ಕೆಲಸ ಇಲ್ಲದಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಎಂಎಸ್‌ಪಿಗಿಂತಲೂ ಹೆಚ್ಚಿದ್ದರೆ ಖರೀದಿ ಪ್ರಕ್ರಿಯೆ ಸ್ಥಗಿತವಾಗುತ್ತದೆ, ಎಂದು ರೈತರು ಹೇಳುತ್ತಾರೆ
ತೊಗರಿ ಖರೀದಿ ಕೇಂದ್ರ ನಾಫೆಡ್ ಖರೀದಿ ಏಜೆನ್ಸಿಯಾಗಿದ್ದರಿಂದ ಮಂಡಳಿಗೆ ಕೆಲಸ ಇಲ್ಲದೆ, ಬಿಳಿ ಆನೆ ಆದಂತಾಗಿದೆ. ಇದಕ್ಕೊಬ್ಬರು ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ ಸೇರಿ ಇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಆದರೆ. ಸಿಬ್ಬಂದಿ ವೇತನ, ಕಟ್ಟಡದ ಬಾಡಿಗೆ ಕೊಡಲು ಮಾತ್ರ ಮಂಡಳಿ ಕೆಲಸ ಮಾಡುವಂತಾಗಿದೆ. ಇದರಿಂದ ರೈತರಿಗೆನು ಲಾಭ ಈ ಭಾಗದ ಜನ ಚುನಾಯಿತ ಪ್ರತಿನಿಧಿಗಳು ಯಾಕೆ ಮಾತಾಡಲ್ಲಾ ಇದಕ್ಕೆ ಯಾಕೆ ಒತ್ತು ಕೊಡಲ್ಲಾ ತೊಗರಿ ಬೆಳೆಗಾರರ ಹಿತ ಕಾಪಾಡಲು ಮುಂದಾಗಲು ರೈತರ ಆಗ್ರಹ..
ಹೊರ ದೇಶದ ತೊಗರಿ ಇಂಪೋರ್ಟ ಮಾಡಿಕೊಂಡು ರೈತರ ತೊಗರಿ ಕಟಾವು ಮಾಡುವ ಸಂಧರ್ಭದಲ್ಲಿ ಮಾರುಕಟ್ಟೆಗೆ ಹೊರದೇಶದ ತೊಗರಿ ತಂದು ಇಡೀ ರೈತರ ಮಾರುಕಟ್ಟೆ ನೆಲಕಚ್ಚಿಹೋಗಿದೆ ತೊಗರಿ ಮಾರ್ಕೆಟಿಂಗ್ ಸತ್ಯಾನಾಸ್ ಆಗಿದೆ ಮಾರುಕಟ್ಟೆ ಯಲ್ಲಿ ಬೆಲೆ ಇಲ್ಲದೆ ರೈತರು ಕಂಗಾಲಾಗುವಂತೆ ಮಾಡಿದೆ ಇನ್ನೊಂದು ಕಡೆ ಬೆಂಬಲ ಬೆಲೆ MSP ಕಾನೂನು ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಮಿನಾಮೇಷ ಎಣಿಸುತ್ತಿದೆ ಡಾ|| ಎಂ ಎಸ್ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ c2+50% ಸೇರಿಸಿ ಬೆಲೆ ನಿಗದಿ ಪಡಿಸಬೆಕು ರೈತ ಸಂಘ ಒತ್ತಾಯಿಸುತ್ತದೆ ಎಂದರು.
Post a Comment