ಕಲಬುರಗಿ: ಸಂಗೀತಕ್ಕೆ ಔಷಧದ ಶಕ್ತಿ ಇದ್ದು, ಮಾನಸಿಕ ನೆಮ್ಮದಿ ಜತೆಗೆ ದೈಹಿಕ ರೋಗಗಳನ್ನು ನೀಗಿಸುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಹಾಗೂ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜಾನಪದ, ತತ್ವ ಪದಕಾರರು ನಮ್ಮ ಇತಿಹಾಸ ಹಾಗೂ ನಡೆ ನುಡಿಗಳನ್ನು ಸಂಗೀತದ ಮೂಲಕ ವರ್ಣಿಸಿದ್ದಾರೆ. ಸಂಗೀತ ಆಲಿಕೆ ಹಲವು ರೋಗಗಳು ನಿವಾರಣೆ ಆಗುತ್ತವೆ ಎಂಬುದು ಸಂಶೋಧನೆಗಳಿಗಿದ ಸಾಬೀತಾಗಿದೆ ಎಂದರು.
ಅಜಲಪುರದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಸಂಗೀತಕ್ಕೆ ಕಟ್ಟಳೆಗಳಿಲ್ಲ. ಎಲ್ಲರಿಗೂ ಸಮನಾಗಿ ಕಾಣುವ ಮೂಲಕ ಶ್ರೀಗುರು ಪುಟ್ಟರಾಜ ಗವಾಯಿಗಳು ಸಂಗೀತ ಧಾರೆ ಎರೆದಿದ್ದಾರೆ. ವಿಶೇಷ ಚೇತನರ ಬಾಳಿಗೆ ಕಾಮಧೇನು ಆಗಿದ್ದಾರೆ ಎಂದು ಹೇಳಿದರು.
ಮೇಯರ್ ಯಲ್ಲಪ್ಪ ನಾಯ್ಯೋಡಿ, ಕಸಾಪ ಜೇವರ್ಗಿ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಜೇವರ್ಗಿ ತಾಲೂಕ ವಚನ ಸಾಹಿತ್ಯ ಅಧ್ಯಕ್ಷರಾದ ಕಲ್ಯಾಣಿಕುಮಾರ ಸಂಗಾವಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶಿವಶರಣಪ್ಪ ಕೋಬಾಳ, ದೂರದರ್ಶನದ ನಿವೃತ ಅಧಿಕಾರಿ ಸದಾನಂದ ಪೆರ್ಲಾ, ಕಲ್ಯಾಣಕುಮಾರ ಸಂಗಾವಿ, ನೀಲಕಂಠ ಎಂ. ಜಮಾದಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಶಂಕರ ಹೂಗಾರ, ಪಂಚಪೀಠ ವಾರ್ತಾಧಿಕಾರಿ ಸಿದ್ರಾಮಪ್ಪ ಅಲಗೂಡಕರ್, ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಅಧ್ಯಕ್ಷ ಬಾಬುರಾವ ಕೋಬಾಳ, ಜರ್ನಲಿಸ್ಟ್ ಅನಿಲ ಸುಂಧೆ,ಅರುಣ ಬಾನ್ಸೊಡೆ,ಚೇತನ್ ಕೋಬಾಳ ಇತರರಿದ್ದರು.
2024ನೇ ಸಾಲಿನ ರಾಜ್ಯ ಮಟ್ಟದ "ಕರ್ನಾಟಕ ಚೇತನ ಪ್ರಶಸ್ತಿ ಪುರಸ್ಕೃತರಾದವರು
ಸಮಾಜ ಸೇವೆ ಕ್ಷೇತ್ರ : ಶ್ರೀ ಚಂದ್ರಶೇಖರ ಮಡಿವಾಳ ಖ್ಯಾತ ಉದ್ದಿಮೇದಾರರು, ಕಲಬುರಗಿ
ಸಮಾಜ ಸೇವೆ ಕ್ಷೇತ್ರ : ಶ್ರೀ ಧರ್ಮರಾಜ ಬಿ. ಹೇರೂರ
ವೈದ್ಯಕೀಯ ಕ್ಷೇತ್ರ : ಡಾ. ಎಸ್.ಎಸ್.ಪಾಟೀಲ ಹೋಮಿಯೋಪತಿ ವೈದ್ಯರು ಹಾಗೂ ಸಾಹಿತಿಗಳು
ವೈದ್ಯಕೀಯ ಕ್ಷೇತ್ರ : ಶ್ರೀ ಓಂಪ್ರಕಾಶ ಬರಸಾನೂರಮಠ
ವೈದ್ಯಕೀಯ ಕ್ಷೇತ್ರ : ಡಾ. ಸುರೇಶ ಬಂಡಗರ ನೇತ್ರ ಅಧಿಕಾರಿಗಳು, PHC ಗೊಬ್ಬುರ (ಬಿ)
ಮಾಧ್ಯಮ ಕ್ಷೇತ್ರ : ಶ್ರೀ ಬ್ರಹ್ಮಾನಂದ ಅರಳಿ, ನಿಡಗುಂದಾ
ಸರಕಾರಿ ಸೇವೆ ಕ್ಷೇತ್ರ : ಶ್ರೀ ಶಿವರಾಜ ಬಸವರಾಜ ಮುರಡಿ
ಪೋಲೀಸ್ ಇಲಾಖೆ : ಶ್ರೀ ರಾಜಶೇಖರ ಹಡಪದ ಕೊಂಡಗೂಳಿ
ಪೋಲಿಸ್ ಇಲಾಖೆ : ಶ್ರೀ ದಯಾನಂದ ಬಿ. ಜಮಾದಾರ
ಶಿಕ್ಷಣ ಕ್ಷೇತ್ರ : ಶ್ರೀ ಮಲ್ಲಕಾರ್ಜುನ ಬಸವರಾಜ, ಕೋನಶಿರಸಗಿ
ಶಿಕ್ಷಣ ಕ್ಷೇತ್ರ : ಶ್ರೀ ಚಂದ್ರಶಾಗೌಡ ಮಾಲಿ ಪಾಟೀಲ್
ಯೋಗ ಕ್ಷೇತ್ರ : ಶ್ರೀ ಶಿವಲಿಂಗಯ್ಯ ಹಿರೇಮಠ
ಸಮಾಜ ಸೇವೆ ಕ್ಷೇತ್ರ : ಶ್ರೀ ರವಿಶಂಕರ ಎ.ಕುಲಾಲಿ, ಗೊಬ್ಬುರ (ಬಿ)
ಸಮಾಜ ಸೇವೆ ಕ್ಷೇತ್ರ : ಶ್ರೀ ಚನ್ನಬಸಪ್ಪ ಗೊಲ್ಲಾಳಪ್ಪ ಹೂಗಾರ
ಸಂಗೀತ ಕ್ಷೇತ್ರ : ಶ್ರೀ ಮಡಿವಾಳಯ್ಯ ಸಾಲಿಮಠ
ಕಲಾ ಕ್ಷೇತ್ರ : ಶ್ರೀಮತಿ ಜ್ಯೋತಿ ಹಂಚಾಟೆ
ಸಮಾಜ ಸೇವೆ ಕ್ಷೇತ್ರ : ಶ್ರೀ ಚಂದ್ರಶೇಖರ ಗುರುಸಂಗಪ್ಪ ಕರಜಗಿ
ಸಾಹಿತ್ಯ ಕ್ಷೇತ್ರ : ಶ್ರೀ ರಾಜೇಂದ್ರ ಝಳಕಿ
ಸಂಗೀತ ಕ್ಷೇತ್ರ : ಶ್ರೀ ಬಲವಂತ ಉದನೂರ
ಶಿಕ್ಷಣ ಕ್ಷೇತ್ರ : ಶ್ರೀ ವಿಜಯಕುಮಾರ ಸಾಲಿಮಠ
ಸಮಾಜ ಸೇವೆ ಕ್ಷೇತ್ರ : ಶ್ರೀ ವಿಶ್ವನಾಥ ಸಾಹುಕಾರ, ತಿಳಗೂಳ
ಸರಕಾರಿ ಸೇವೆ ಕ್ಷೇತ್ರ ಶ್ರೀ ಬಾಬುರಾವ ಬಿರಾದಾರ ಕೂಡಿ
ಸಂಗೀತ ಕ್ಷೇತ್ರ ಶ್ರೀ ಸೂರ್ಯಕಾಂತ ಬಿ. ಪೂಜಾರಿ ಗೊಬ್ಬುರ (ಬಿ)
ಸಂಗೀತ ಕ್ಷೇತ್ರ ಶ್ರೀ ಜಗದೀಶ ಮಾನು ರಂಗಂಪೇಟ
ಹಲವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಗಲಿಂಗ್ಯಹೀರೇಮಠ ರವರು ಕಾರ್ಯಕ್ರಮನ್ನು ನಿರೂಪಿಸಿ ವಂದಿಸಿದರು.
ವರದಿ: ✍️ ಚಂದ್ರಶೇಖರ ಪಾಟೀಲ್
Post a Comment