ಮಹಾಳಿಂಹರಾಯರ ಪಲ್ಲಕ್ಕಿ ಮೆರವಣಿಗೆಯ ಭಂಡಾರದಲ್ಲಿ ಮಿಂದೆದ್ದ ಹಾಲುಮತಸ್ಥರು
ಅಫಜಲಪುರ: ಹಾಲುಮತಕಾಶಿ ಹುಲಜಂತಿ ಮಹಾಳಿಂಹರಾಯರ ಜಾತ್ರೆಯು ಪ್ರತಿವರ್ಷ ದೀಪಾವಳಿ ಹಬ್ಬದಂದು ವಿಜೃಂಭಣೆಯಿಂದ ನಡೆಯುತ್ತದೆ. ಅದೆ ರೀತಿಯಾಗಿ ಕರ್ನಾಟಕದ ಇನ್ನೊಂದು ಗಡಿ ಅಂಚಿನಲ್ಲಿರುವ ಬಳೂರ್ಗಿ ಮಹಾಳಿಂಹರಾಯರ ಜಾತ್ರೆಯೂ ಅದೆ ರೀತಿಯಲ್ಲಿ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಗ್ರಾಮಸ್ಥರೆಲ್ಲರ ಮನೆಗಳಿಂದ ನೀರು ನೈವೇದ್ಯ ದೇವರ ಪಲ್ಲಕ್ಕಿಗೆ ಭಕ್ತರಿಂದ ಅರ್ಪಣೆಯಾಗುತ್ತದೆ.ನಂತರ ಗದ್ದುಗೆ ಪೂಜಾರಿಗಳಿಂದ ಲೋಕ ಕಲ್ಯಾಣದ ಹೇಳುಕೆಗಳು ನಡೆಯುತ್ತವೆ. ನಂತರ ಮಹಾಳಿಂಹರಾಯರ ತೊಟ್ಟಿಲು ಕಾರ್ಯಕ್ರಮ ಜರುಗುತ್ತದೆ.ಇದರ ಮಧ್ಯೆ ದೇವರ ಪಲ್ಲಕ್ಕಿಯ ಮೇಲೆ ಭಕ್ತರಿಂದ ಭಂಡಾರದ ಅಭಿಷೇಕವಾಗುತ್ತದೆ.ಸಹಸ್ರ ಭಕ್ತರ ಮಧ್ಯೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ.
ಇದೆ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರಾದ ಭೀಮಣ್ಣ ಪೂಜಾರಿ ಮಡ್ಡಿ,ಮಲ್ಲಪ್ಪ ಕೋತಿ, ಕಲ್ಲಪ್ಪ ಪೂಜಾರಿ,ಮಹಾದೇವ ಪೂಜಾರಿ,ಯಲ್ಲಪ್ಪ ಪೂಜಾರಿ,ಭೀರಪ್ಪ ಬಿಂಜಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Post a Comment