Clickable Image

Friday, November 1, 2024

ಭೀಮೆಯ ಸೀಮೆಯಲ್ಲಿ ಜಗಮಗಿಸಿದ ಕನ್ನಡಾಂಬೆಯ ಭವ್ಯ ರಥೋತ್ಸವ..

 ಭೀಮೆಯ ಸೀಮೆಯಲ್ಲಿ ಜಗಮಗಿಸಿದ ಕನ್ನಡಾಂಬೆಯ ಭವ್ಯ ರಥೋತ್ಸವ..


ಅಫಜಲಪುರ: ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ತಾಲೂಕು ಆಡಳಿತದ ವತಿಯಿಂದ ಅದ್ದೂರಿಯಾಗಿ ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ ನಡೆಯಿತು. ಶಾಸಕರಾದ ಎಮ್.ವೈ.ಪಾಟೀಲರು ಹಾಗೂ ತಹಶೀಲ್ದಾರ ಸಂಜುಕುಮಾರ ದಾಸರ ಮೆರವಣಿಗೆಗೆ ಚಾಲನೆ ನೀಡಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡದ ತೇರು ಭವ್ಯ ಮೆರವಣಿಗೆಯಲ್ಲಿ ಕಂಗೊಳಿಸಿದಳು.



ನಂತರ ಪಟ್ಟಣದ ನ್ಯಾಶನಲ್ ಫಂಕ್ಷನ್ ಹಾಲನಲ್ಲಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಮ್.ವೈ.ಪಾಟೀಲ ಪ್ರತಿ ವರ್ಷಕ್ಕಿಂತ ಈ ವರ್ಷದ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ನಮ್ಮ ಭಾಗದ ಜನರ ಕನ್ನಡದ ಮೇಲಿರುವ ಅಭಿಮಾನ ಪ್ರೀತಿ ಎತ್ತಿತೋರುತ್ತದೆ.ತಹಶೀಲ್ದಾರ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗಗಳ ಸಹಯೋಗದಲ್ಲಿ ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಜನರ ಕಣ್ಮನ ಸೆಳೆದಿದೆ‌.ಮಹಾರಾಷ್ಟ್ರದ ಗೆಇ ಭಾಗದಲ್ಲಿರುವ ಅಫಜಲಪುರ ತಾಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅದ್ದೂರಿತನ ಎದ್ದು ಕಾಣುತ್ತಿದೆ.ನಾವು ಬೆರೆ ಭಾಷೆಗಳನ್ನು ದ್ವೇಷಿಸದೇ ನಮ್ಮ ಭಾಷೆಯ ಮೇಲೆ ಹೆಚ್ಚಿನ ಪ್ರೀತಿ ಇರಬೇಕಿದೆ.ಶೈಕ್ಷಣಿಕವಾಗಿ ಎಷ್ಟೋ ಜನರು ಕನ್ನಡ ಭಾಷೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆರಿದ್ದಾರೆ.ನಾವು ಕನ್ನಡಾಂಬೆಯ ಮಕ್ಕಳಾಗಿ ಕನ್ನಡಕ್ಕೆ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕನ್ನಡ ಉಳುಸಿ ಬೆಳಸಿ ಎಂದು ಎಲ್ಲರಿಗೂ ಶುಭ ಹಾರೈಸಿದರು.


ನಂತರ ಮಾತನಾಡಿದ ತರಹ ಸಂಜುಕುಮಾರ ದಾಸರ ಕನ್ನಡ ಎಂದಾಗ ನಮ್ಮ ಮನದಲ್ಲಿ ಎಲ್ಲಿಲ್ಲದ ಉಲ್ಲಾಸ ಉತ್ಸಾಹ ತನ್ನಿಂದ ತಾನೆ ಬರುತ್ತದೆ.ನಾವು ಉಸಿರಾಡುವ ಗಾಳಿಯಿಂದ ಬದುಕಿನ ಬವಣೆಗೆ ಬೇಕಾಗುವ ಎಲ್ಲವನ್ನು ನೀಡುವ ನಮ್ಮ ಕರ್ನಾಟಕ ನಮ್ಮ ಕನ್ನಡ ಭಾಷೆ.ಈ ಮಣ್ಣಿನಲ್ಲಿ ಹುಟ್ಟಿದ ನಾವುಗಳೆಲ್ಲರು ಪುಣ್ಯವಂತರು.ನಾವು ತಾಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಮಾಡುವ ವಿಚಾರವಾಗಿ ಸಭೆ ಸೇರಿದಾಗ ಎಲ್ಲಾ ಇಲಾಖೆಯ ಅಧಿಕಾರಿಗಳು ಅದ್ದೂರಿಯಾಗಿ ಮಾಡಲು ಎಲ್ಲರೂ ಸಮ್ಮತ ಸೂಚಿಸಿದರು. ಯಾಕೆಂದರೆ ಎಲ್ಲರೂ ಈ ಮಣ್ಣಿನ ಋಣದಲ್ಲಿದ್ದೆವೆ.ಈ ಮಣ್ಣಿನ ಮಕ್ಕಳಾಗಿ ಕನ್ನಡಾಂಬೆಯ ಕುವರರಾಗಿ ನಾವು ಇಷ್ಟು ಮಾಡದೆ ಇದ್ದರೆ ಕನ್ನಡ ಭಾಷಿಗರಿಗೆ ಶೊಭೆ ತರುವಂತಹದಲ್ಲ.ಪಟ್ಟಣದಲ್ಲಿ ತಾಯಿ ಕನ್ನಡಾಂಭೆಯ ಭಾವಚಿತ್ರ ಮೆರವಣಿಗೆ ಮಾಡುವಾಗ ನಮ್ಮೆಲ್ಲರಿಗಷ್ಟೆ ಅಲ್ಲದೇ ಕನ್ನಡಾಭಿಮಾನಿಗಳ ಹರ್ಷ ತರುವಂತಹ ಸ್ಥಿತಿ ಕಂಡುಬರುತ್ತಿದೆ.ನಮ್ಮ ನಾಡು ನಮ್ಮ ನುಡಿಗಾಗಿ ನಾನು ಯಾವುದಕ್ಕೂ ರಾಜಿಯಾಗದೆ ಎಲ್ಲರಲ್ಲೂ ಕನ್ನಡದ ಕಂಪು ಪಸರಿಸಲಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.


ಇದೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾದ ಬಿ.ಎಮ್.ರಾವ್, ಕೃಷಿ ಇಲಾಖೆ ಅಧಿಕಾರಿಗಳಾದ ಎಚ್.ಎಸ್.ಗಡಗಿಮನಿ,ಪುರಸಭೆ ಮುಖ್ಯಾಧಿಕಾರಿಗಳಾದ ವಿಜಯಮಹಾಂತೇಶ ಹೂಗಾರ, ಪಶುವೈದ್ಯಾಧಿಕಾರಿಗಳಾದ ಕೆ.ಎಮ್.ಕೋಟೆ,ಆರೋಗ್ಯ ಆಡಳಿತಾಧಿಕಾರಿ ವಿನೋದ ರಾಠೋಡ, ಸೇರಿದಂತೆ ಮುಖಂಡರಾದ ಚಂದು ದೇಸಾಯಿ, ಪ್ರಭಾವತಿ ಮೇತ್ರೆ, ಶರಣು ಕುಂಬಾರ,ಶ್ರೀಮಂತ ಬಿರಾದಾರ,ಮಹಾಲಿಂಗ ಅಂಗಡಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

Whatsapp Button works on Mobile Device only