Clickable Image

Friday, November 1, 2024

ಕಲಬುರಗಿ ಪೆಟ್ರೋಲ್ ಸುರಿದು ಮಹಿಳೆಯ ಬರ್ಬರ ಕೊಲೆ!

 ಕಲಬುರ್ಗಿ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮಹಿಳೆಯ ಮೇಲೆ ದುಷ್ಕರ್ಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬೀಕರವಾಗಿ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಇಟಗಾ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.

 ಸಾಂದರ್ಭಿಕ ಚಿತ್ರಗಳು.


ಕೊಲೆಯಾದ ಮಹಿಳೆಯನ್ನು ಜ್ಯೋತಿ (29) ಎಂದು ಹೇಳಲಾಗಿದ್ದು. ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿತ್ತು. ಕಲ್ಬುರ್ಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಗಂಡನ ಜೊತೆಗೆ ವಾಸಿಸುತ್ತಿದ್ದಳು. ಆದರೆ ಕಳೆದ ಐದು ವರ್ಷದ ಹಿಂದೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಳು.


ಇನ್ನು ನಿನ್ನೆ ಮನೆಯಿಂದ ಹೊರಗಡೆ ಹೋದ ಜ್ಯೋತಿ ಮಧ್ಯಾಹ್ನದ ಹೊತ್ತಿಗೆ ಸುಟ್ಟ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಸಂಬಂಧಿಕರೇ ಯಾರೋ ಈ ಒಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

Post a Comment

Whatsapp Button works on Mobile Device only