ಶಹಾಪುರ : ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ನಿಷ್ಕಾಳಜಿಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಒಂದೂವರೇ ತಿಂಗಳ ಮಗು ಸಾವನಪ್ಪಿದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಹೋತಪೇಟ್ ಗ್ರಾಮದ ತನುಶ್ರೀ ಗಂಡ ಪ್ರಕಾಶ್ ದಂಪತಿಯ ಮಗು ಸುಮಾರು ಒಂದುವರೆ ತಿಂಗಳ ಹಿಂದೆ ಜನಿಸಿದ್ದು. ಮಗುವಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತಿದ್ದ ರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿನ ವೈದ್ಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದು. 9 ದಿನದ ಹಿಂದೆ ಖಾಸಗಿ ಆಸ್ಪತ್ರೆಯಾದ ಶಿಶು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಮಗುವಿದಲ್ಲಿ ರಕ್ತದ ಸಮಸ್ಯೆ ಇದ್ದು ಬೇರೆ ರಕ್ತ ಹಾಕುವುದಾಗಿ ತಿಳಿಸಿದ್ದಾರೆ. ನಂತರ ಬುಧವಾರ ರಾತ್ರಿಯಿಂದ ಚಿಕೆತ್ಸೆ ನೀಡಿದ್ದು ರಕ್ತವನ್ನು ಅದಲು ಬದಲು ಆಗಿದ್ದು ರುಬಿನ ಬೇಗಂ ಗಂಡ ನಾಸಿರ್ ದಂಪತಿಯ ಮಗುವಿಗೆ ಹಾಕಬೇಕಿದ್ದ ರಕ್ತವನ್ನು ಮೃತ ಮಗುವಿಗೆ ಹಾಕಿದ್ದು.. ಮಗು ಸಾವನ್ನಪಿದೆ. ಸುಮಾರು 9 ದಿನದಿಂದ ಮಗುವನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು 50 ಸಾವಿರ ಬಿಲ್ ಮಾಡಿದ್ದಾರೆ. ಇದೀಗ ಏಕಏಕಿ ಮಗು ಸಾವನಪ್ಪಿದೆ ಎಂದು ತೋರಿಸುತಿದ್ದಾರೆ. ಎಂದು ಮೃತ ಮಗುವಿನ ಪೋಷಕರು ಕಣ್ಣೀರು ಹಾಕಿದರು. ಮೃತ ಮಗುವಿನ ತಾಯಿಯ ಕಣ್ಣೀರು ಕರುಳು ಕಿವುಚುವಂತಿತ್ತು.
ಕಟ್ಟು ಕಥೆ ಕಟ್ಟುತಿರುವ ವೈದ್ಯರು..
ಆಸ್ಪತ್ರೆಗೆ ದಾಖಲು ಮಾಡುವಾಗ ಮಗುವಿನ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಿದರು. ಸಹ ಮಗುವಿನ ಪೋಷಕರು ದಾಖಲು ಮಾಡಲು ಒತ್ತಡ ಹೇರಿದ್ದರಿಂದ ದಾಖಲಿಸಿಕೊಂಡಿದ್ದೇವೆ ಎಂದು ಆಸ್ಪತ್ರೆಯಲ್ಲಿನ ವೈದ್ಯರು ಸಿಬ್ಬಂದಿಗಳು ಕಟ್ಟು ಕಥೆ ಹೇಳುತ್ತಿದ್ದು ಈ ಕುರಿತು ಆಸ್ಪತ್ರೆಯಲ್ಲಿನ ವೈದ್ಯರು ಮೇಲೆ ಕಾನೂನು ಕ್ರಮ ಜರುಗಿಸಲು ಮೃತ ಮಗುವಿನ ಪೋಷಕರು ಅಗ್ರಹಿಸಿದ್ದಾರೆ.
ಹಣ ವಸೂಲಿ ಮಾಡುವ ದಂಧೆ :
ಇನ್ನು ಸರ್ಕಾರಿ ಆಸ್ಪತ್ರೆಗೆ ಹೋದರೆ ಖಾಸಗಿ ಆಸ್ಪತ್ರೆಗೆ ರವನೀಸುತಿದ್ದು. ಖಾಸಗಿ ಅವರು ಹೆಚ್ಚಿನ ಬಿಲ್ ಮಾಡಿ ಬಡವರ ರಕ್ತ ಹಿರುವ ಕೆಲಸ ಮಾಡುತಿದ್ದರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಎಂದು ಪೋಷಕರಾದ ರಮೇಶ್ ಹಾಗೂ ಗಾಲಿದ್ ಭಾಯ್ ಆಗ್ರಹಿಸಿದ್ದಾರೆ…
Post a Comment