ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಜೀಡಗಾ ಶ್ರೀಮಠದ ಪರಮ ಪೂಜ್ಯ
ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ 40 ನೇಯ ಗುರುವಂದನಾ ಪ್ರಯುಕ್ತವಾಗಿ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸುಕ್ಷೇತ್ರ ಮುಗಳಖೋಡದ ಸದ್ಗುರು ಶ್ರೀ ಯಲ್ಲಾಲಿಂಗ ಬ್ರಹನ್ಮಠದಲ್ಲಿ ಆಚರೀಸುತಿದ್ದು,
.
ಕಾರ್ಯಕ್ರಮಗಳು ನವೆಂಬರ್ 30 ರಿಂದ ಡಿಸೆಂಬರ್ 02 ವರೆಗೆ ನಡೆದು ಬರುತ್ತಿವೆ
ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ತಮ್ಮ ಗುರುವಂಧನ ಸಮಾರಂಭ ಎಂಬುವುದು ನೇಪ ಮಾತ್ರವಾಗಿದ್ದು ಅದು ವಿಶ್ವಕ್ಕೆ ಹಾಗೂ ದೇಶಕ್ಕೆ ಸಮರ್ಪೀತವಾಗಬೆಕೆಂಬುವ ಮಹಾ ಸಂಕಲ್ಪದೊಂದಿಗೆ ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ ಜೈ ಶಿಕ್ಷಣ ಎಂಬುವ ಶಿರ್ಷೀಕೆಯಡಿಯಲ್ಲಿ ಗುರುವಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ,
ಜೈ ಜವಾನ್ :- ಭಾರತಿಯ ಸೈನಿಕರಿಗೆ ಸಮರ್ಪಣೆ ಹೆಗೆಂದರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಾಯಿ ಭಾರತೀಯ ಸೇವೆ ಮಾಡುತ್ತಿರುವ ಹೆಮ್ಮೆಯ ಸೈನಿಕರು ದೇಶ ಸೇವೆ ಮಾಡುವ ಸಮಯದಲ್ಲಿ ಆರೋಗ್ಯದ ತೊಂದರೆಗಳನ್ನು ಅನುಭವಿಸುತ್ತಾ ಸಾವು ಬದುಕೀನ ಮಧ್ಯೆ ಹೊರಾಡುತ್ತಾರೆ ಈ ಸಂದರ್ಭದಲ್ಲಿ ಅನೇಕ ಜನ ಸೈನಿಕರಿಗೆ ಸರಿ ಹೊಂದುವ ರಕ್ತದ ಗುಂಪು ಸೀಗುವದಿಲ್ಲ ಈ ಸಂದರ್ಭದಲ್ಲಿ ಅನೇಕ ಜನ ಸೈನಿಕರು ಸಾವು ಬದುಕೀನ ಮಧ್ಯೆ ಹೊರಾಡುತ್ತಾರೆ, ಈ ದೃಷ್ಟಿಯಿಂದ ಶ್ರೀಮಠದ ವತಿಯಿಂದ ಬೃಹತ್ ರಕ್ತದಾನ ಶೀಭಿರವನ್ನು ನವೆಂಬರ್ 30 ರಂದು ಹಮ್ಮಿಕೊಳ್ಳಲಾಗಿದೆ ಇದರೊಂದಿಗೆ ಸಂಗ್ರಹವಾಗಿರುವ ರಕ್ತವನ್ನು ಭಾರತೀಯ ಸೇನಾ ಆಸ್ಪತ್ರೆಗಳಿಗೆ ಕಳುಹಿಸಿ ಕೊಡುವುದು.
ಜೈ ಕೀಸಾನ್.:- ಎಂಬುವ ಕಾರ್ಯಕ್ರಮದ ವಿವರ:- ರೈತನೆ ರಾಷ್ಟ್ರದ ಬೆನ್ನೆಲುಬು ರೈತನಿಗೆ ಗೌರವ ಕೊಟ್ಟರೆ ರಾಷ್ಟ್ರಕ್ಕೆ ಗೌರವ ಕೊಟ್ಟಂತೆ ಎಂಬುವ ಈ ಪರಿಕಲ್ಪನೆಯೊಂದಿಗೆ ದಿನಾಂಕ 1-12-2024 ರಂದು ಮಧ್ಯಾಹ್ನ 2 ಘಂಟೆಗೆ ಶ್ರೀಮಠದ ಆವರಣದಲ್ಲಿ ಮೂವತ್ತು ಸಾವಿರ ರೈತರನ್ನು ಓಂದೂಗೂಡಿಸಿ ಆ ರೈತರಿಗೆ ಬಿಳಿ ಬಟ್ಟೆಯಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ಗಾಂಧಿ ಟೋಪಿಗಳನ್ನು ಧರಿಸಿ ಬುಜದ ಮೇಲೆ ಹಸೀರು ಶಾಲು ಹೊದಿಸಿ ರೈತರಿಗೆ ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡುವುದು.
ಜೈ ವಿಜ್ಞಾನ :- ಪರಮ ಪೂಜ್ಯ ಶ್ರೀಗಳವರು ಸಂಕಲ್ಪದೊಂದಿಗೆ ಡಿಸೆಂಬರ್ 02 ರಂದು ಸಾಯಂಕಾಲ 06 ಘಂಟೆಗೆ ಇಸ್ರೊ ತಂಡದವರಿಗೆ ಪರಮ ಪೂಜ್ಯ ಶ್ರೀಗಳವರು ಚಂದ್ರಯಾನ 3 ಚಂದ್ರನ ಅಂಗಳದಲ್ಲಿ ಕಾಲಿಟ್ಟು ಭಾರತದ ವಿಜ್ಞಾನದ ಶಕ್ತಿಯನ್ನು ವಿಶ್ವಕ್ಕೆ ಪರೀಚಯಿಸಿರುವು ಸಲುವಾಗಿ ಇಸ್ರೊ ವಿಜ್ಞಾನಿಗಳ ತಂಡದವರಿಗೆ ಶ್ರೀಮಠದ ವತಿಯಿಂದ ಕೊಡಲ್ಪಡುವ ರಾಷ್ಟ್ರೀಯ ಸಿದ್ದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುವದು ಹಾಗೂ ಇದೆ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ತಂಡಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ಜೈ ಶಿಕ್ಷಣ:-
ಪರಮ ಪೂಜ್ಯ ಶ್ರೀಗಳವರ ಬಹುದೀನಗಳ ಕನಸ್ಸು ಬಡವ ಮಕ್ಕಳ ಊಚೀತ ವಸತಿ ಶಿಕ್ಷಣದ ಕನಸ್ಸು ಈಗಾಗಲೆ ಸುಕ್ಷೇತ್ರ ನವ ಕಲ್ಯಾಣ ಜೀಡಗಾ ಶ್ರೀಮಠದಲ್ಲಿ ನೂರಾರು ಮಕ್ಕಳಿಗೆ ಹೈಟೇಕ್ ಮಾದರೀಯ ವಸತಿ ಶಿಕ್ಷಣದ ಸೌಲಭ್ಯಗಳನ್ನು ಓದಗೀಸಿ ಕೊಟ್ಟು ಶಿಕ್ಷಣ ನಿಡುತಿದ್ದು ಮತ್ತು ಇದರೊಂದಿಗೆ ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಸಾವಿರ ಮಕ್ಕಳ ಊಚೀತ ಶಿಕ್ಷಣದ ಸಂಕಲ್ಪವನ್ನು ಹೊಂದಿದ್ದು ಈ ಮಹಾ ಸಂಕಲ್ಪಕ್ಕಾಗಿ ಪರಮ ಪೂಜ್ಯ ಶ್ರೀಗಳವರ 40 ನೇಯ ಗುರುವಂದನಾ ಪ್ರಯುಕ್ತವಾಗಿ ಅಕ್ಷರ ದಾಸೋಹಕ್ಕಾಗಿ ದಿನಾಂಕ 01-11-2024 ರಂದು ಅಪ್ಪನಿಗೆ ವಿಶ್ವ ದಾಖಲೆಯ 400 ತುಲಾಭಾರ ಸೇವೆ ಎಂಬುವ ಮಹಾಕಾರ್ಯ ಹಾಗೂ ಈ ತುಲಾಭಾರ ಸೇವೆಯಿಂದ ಬಂದೀರುವ ಹಣವನ್ನು ಬಡವ ಮಕ್ಕಳ ಊಚೀತ ವಸತಿ ಶಿಕ್ಷಣದ ಸಲುವಾಗಿ ಉಪಯೋಗಿಸಲಾಗುವುದು,
ಈ ವರ್ಷದ ಪರಮ ಪೂಜ್ಯ ಶ್ರೀಗಳವರ 40 ನೇಯ ಗುರುವಂದನಾ ಪ್ರಯುಕ್ತವಾಗಿ ವಿಶ್ವ ಮೆಚ್ಚುವ ಮಹಾನ್ ಕಾರ್ಯಗಳೊಂದಿಗೆ ಪರಮ ಪೂಜ್ಯ ಶ್ರೀಗಳವರು ಮುಂದಾಗಿದ್ದಾರೆ.
🙏🙏
Post a Comment