Clickable Image

Wednesday, November 13, 2024

ಮಕ್ಕಳೊಂದಿಗೆ ಡಿ.ಸಿ. ಸಂವಾದ:* *ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ* *-ಬಿ.ಫೌಜಿಯಾ ತರನ್ನುಮ್*

 *ಮಕ್ಕಳೊಂದಿಗೆ ಡಿ.ಸಿ. ಸಂವಾದ:*


*ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ*


*-ಬಿ.ಫೌಜಿಯಾ ತರನ್ನುಮ್*





ಕಲಬುರಗಿ,ನ‌.12(ಕ.ವಾ) ಕಠಿಣ ಪರಿಶ್ರಮದಿಂದ ಮುಂದೆ ಸಾಗಿದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಐ.ಎ.ಎಸ್-ಐ‌.ಪಿ‌.ಎಸ್. ಅಧಿಕಾರಿಯಾದನೇ ಸಾಧನೆ ಎನ್ನಲ್ಲ. ಬದಲಾಗಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದಲ್ಲಿ ಅದು ಸಹ ಸಾಧನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.


ಮಂಗಳವಾರ ಚಿತ್ತಾಪುರ ತಾಲೂಕಿನ ಮಾಡಬೂಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ "ಸ್ಪೂರ್ತಿಯ ಕಿರಣ" ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ನಿಮ್ಮಂತೆ ಸರಳ ಮತ್ತು ಮಧ್ಯಮ ಕುಟುಂಬದಿಂದ ಬಂದಿರುವೆ. ನಮ್ಮನ್ನೆಯಲ್ಲಿ ಯಾರು ಸರ್ಕಾರಿ ನೌಕರಿಯಲ್ಲಿರಲಿಲ್ಲ. ಕಷ್ಟು ಪಟ್ಟು ಓದಿದ ಪರಿಣಾಮ ಐ‌.ಎ.ಎಸ್‌ ಅಧಿಕಾರಿಯಾಗಿರುವೆ ಎಂದು ತಮ್ಮ‌ ಬದುಕಿನ ಪುಟ ತೆರೆದಿಟ್ಟ ಅವರು, ನೀವು ಸಹ ಛಲ, ಕಷ್ಟಪಟ್ಟು ಅಭ್ಯಾಸ ಮಾಡಿದಲ್ಲಿ ಯಶ ಸಾಧ್ಯ ಎಂದು ಮಕ್ಕಳನ್ನು ಉದ್ದೇಶಿಸಿ ಸ್ಪೂರ್ತಿಯ ಮಾತುಗಳನ್ನಾಡಿದರು.


*ಪರೀಕ್ಷೆಗೆ ಹೆದರಬೇಡಿ:*


ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ

ಹೆದರುವ ಮನಸ್ಥಿತಿ ಬಿಡಬೇಕು. ಪರೀಕ್ಷೆಯನ್ನು ಖುಷಿಯಿಂದ ಬರೆಯಬೇಕು. ಪ್ರತಿ ವಿದ್ಯಾರ್ಥಿಯ ವ್ಯಕ್ತಿತ್ವ ಬೇರೆಯಾಗಿರುತ್ತದೆ. ಹೀಗಾಗಿ ಇತರೆ ವಿದ್ಯಾರ್ಥಿಯನ್ನು ನಕಲು ಮಾಡದೆ ತಮ್ಮಿಷ್ಟದ ದಾರಿಯಲ್ಲಿ ಗುರಿಯೆಡೆಗೆ ಸಾಗಬೇಕು ಎಂದು ಡಿ.ಡಿ.ಪಿ.ಯು ಶಿವಶರಣಪ್ಪ ಮೂಳೆಗಾಂವ ಮಕ್ಕಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ ಆನಂದಶೀಲ ಕೆ., ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಭಾವತಿ ಪಾಟೀಲ, ಉಪ ಪ್ರಾಂಶುಪಾಲರು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ಪ್ರೌಢ ಮತ್ತು ಪದವಿ ಪುರ್ವ ಕಾಲೇಜಿನ ಸುಮಾರು 500 ಮಕ್ಕಳು ಇದ್ದರು. ಇದೇ ಸಂದರ್ಭದಲ್ಲಿ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರಿಶೀಲಿಸಿದ ಡಿ.ಸಿ. ಅವರು ಮಕ್ಕಳೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು.

Post a Comment

Whatsapp Button works on Mobile Device only