ಆಳಂದ 97 ರ ಇಳಿ ವಯಸ್ಸಿನಲ್ಲಿ ಇಹಲೋಕ ತೇಜಿಸಿದ ಮಾಳಿ ಸಮಾಜದ ಹಿರಿಯ ಜೀವಿ ದಿವಂಗತ ಪಂಡಿತ್ ರಾವ್ ದೂಳೆ
ರಾಜ್ಯ ಮಾಳಿ ಸಮಾಜ ಉಪಾಧ್ಯಕ್ಷ, ಕಲ್ಬುರ್ಗಿ ಜಿಲ್ಲಾ ಮಾಳಿ ಸಮಾಜದ ಗೌರವ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಭವನ ಹಾಲಿ ನಿರ್ದೇಶಕರಾದ ದಿವಂಗತ ಶ್ರೀ ಪಾಂಡಿತ್ ರಾವ್ ತಂದೆ ಆನಂದ್ ರಾವ್ ಧೂಳೆ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ತಮ್ಮ 97 ವರ್ಷದ ಇಳಿ ವಯಸ್ಸಿನಲ್ಲಿಯೂ ಸದಾ ಸಮಾಜದ ಅಭಿವೃದ್ಧಿಗಾಗಿ ಚಿಂತಿಸಿದ ಹಿರಿಯ ಜೀವ ಇಂದು ಇಹಲೋಕ ತ್ಯಜಿಸಿದ್ದು ಮಾಳಿ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಮಾಜದ ಮುಖಂಡರು ದುಃಖ ವ್ಯಕ್ತಪಡಿಸಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ದಿನಾಂಕ 3.11.2024ರಂದು ಮಧ್ಯಾಹ್ನ 3 ಗಂಟೆಗೆ ಆಳಂದ ಪಟ್ಟಣದ ಉಮರ್ಗ ರಸ್ತೆಯ ತಮ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Post a Comment