Clickable Image

Sunday, March 10, 2024

ಗುಡ್ಡದ ಶ್ರೀ ಗುರು ಮಹಾಂತೇಶ್ವರ ಮಠದ ಮಹಾನ್ ಸಂತ ನ ಮುಡಿಗೇರಿದ "ಕಲ್ಯಾಣ ರತ್ನ ಪ್ರಶಸ್ತಿ" ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಕೊಡ ಮಾಡುವ 2024 ರ "ಕಲ್ಯಾಣ ರತ್ನ" ಪ್ರಶಸ್ತಿ, ಕಾಯಕಯೋಗಿ ಚಿನ್ಮಯ ಗಿರಿಯ ಗುಡ್ಡದ ಮಹಾಂತೇಶ್ವರ ಮಠದ ಪೀಠಾಧಿಪತಿ ಸಂತ ಶ್ರೀ ಷಟಸ್ಥಲ ಬ್ರಹ್ಮ ಸಿದ್ದರಾಮ ಶಿವಾಚಾರ್ಯರ ಸ್ವಾಮೀಜಿ ಅವರ ಮುಡಿಗೇರಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕಲ್ಯಾಣ ರತ್ನ ಪ್ರಶಸ್ತಿಗೆ ಕಲ್ಯಾಣ ಕರ್ನಾಟಕ ಭಾಗದ ಸಾಧಕರಿಗೆ ಅರ್ಜಿ ಆಹ್ವಾನಿಸಲಾಯಿತು, ಹಲವು ಸಾಧಕರು ತಮ್ಮ ಸಾಧನೆಯ ಪರಿಚಯ ಕಳಿಸಿದರು. ಆದರೆ ಈ ಬಾರಿಯ"ಕಲ್ಯಾಣ ರತ್ನ" ಪ್ರಶಸ್ತಿ, ನಿಸ್ವಾರ್ಥತೆಯ ಸಹಕಾರ ಮೂರ್ತಿ ಕಾಯಕಯೋಗಿ ಹಿರಿಯ ಸಂತ ಶ್ರೀ ಷಟಸ್ಥಲ ಬ್ರಹ್ಮ ಸಿದ್ದರಾಮ ಶಿವಾಚಾರ್ಯರ ಪಾದಕ್ಕೆ ಅರ್ಪಿಸಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ್ ಪಗಡೆ ತಿಳಿಸಿದರು. ನಂತರ ಮಾತನಾಡಿದ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿಯ ಸಂಸ್ಥಾಪಕ ಅಧ್ಯಕ್ಷ ಮಹದೇವಪ್ಪ ಪಗಡೆ ಕಲ್ಯಾಣ ನಾಡಿನ ಸಂತ ಕಾಯಕವೇ ಶ್ರೇಷ್ಠ ಎಂದು ತಮ್ಮ ಜೀವ ಸವಿಸಿದ ಶ್ರೀ ಷಟಸ್ಥಲ ಬ್ರಹ್ಮ ಸಿದ್ದರಾಮ ಶಿವಾಚಾರ್ಯರಿಗೆ ಗೌರವ ಸಲ್ಲಿಸುತ್ತಿರುವುದು ನಮ್ಮ ಪುಣ್ಯ ಎಂದರು.. ಶೀಘ್ರದಲ್ಲೇ ಪ್ರಶಸ್ತಿ ಸಮಾರಂಭ ನಡೆಯಲಿದ್ದು ದಿನಾಂಕವನ್ನು ತಿಳಿಸಲಾಗುವುದು ಎಂದರು.. ಇಂದು ಸುದ್ದಿ ವಾಹಿನಿಯ ನೇತೃತ್ವದಲ್ಲಿ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕಿರಿಯ ಶ್ರೀಗಳಾದ ಶ್ರೀ ಷಟಸ್ಥಲ ಬ್ರಹ್ಮ ವೀರಮಹಂತ ಶಿವಾಚಾರ್ಯರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪ ಮಾಡಿ ಅವರ ಅನುಮತಿ ಪಡೆದು ಆಶೀರ್ವಾದದೊಂದಿಗೆ ನಿರ್ಣಯ ತೆಗೆದುಕೊಳ್ಳಲಾಯಿತು....Post a Comment

Whatsapp Button works on Mobile Device only