Clickable Image

Friday, February 23, 2024

ವಿಜಯಪುರ್ ಜನಹಿತ (ಪ್ರೊಬೊನೊ) ವಕೀಲರ ವೃತ್ತಿ ಸೇವೆಗೆ ಅಧಿಸೂಚನೆ.ಎಮ್ ಜಿ ಭೃಂಗಿಮಠ ನೇಮಕ*

 ಜಿಲ್ಲೆಯಲ್ಲಿ ಜನಹಿತ (ಪ್ರೊಬೊನೊ) ವಕೀಲರ ವೃತ್ತಿ ಸೇವೆಗೆ ಅಧಿಸೂಚನೆ.

*ಎಮ್ ಜಿ ಭೃಂಗಿಮಠ ನೇಮಕ*
ವಿಜಯಪುರ: ಪ್ರೊಬೊನೊ(Probono Advocate services ) ವಕೀಲ ವೃತ್ತಿಯ ಸೇವೆಗಾಗಿ ಪ್ರೊಬೊನೊ ಜನಹಿತಕ್ಕಾಗಿ ನ್ಯಾಯವಾದಿಯಾಗಿ ವಿಜಯಪುರದ ಸುಪ್ರಸಿದ್ಧ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರನ್ನು ನೇಮಿಸಿ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರವು 21-02-2024 ರಂದು ಅಧಿಸೂಚನೆ ಹೊರಡಿಸಿದೆ.


 ಈ ಕುರಿತು ರಾಜ್ಯ ಕಾನೂನು ಪ್ರಾಧಿಕಾರವು ನೀಡಿರುವ ನೇಮಕಾತಿ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ನ್ಯಾಧೀಶರಾದ ಶ್ರೀ ಶಿವಾಜಿ ಅನಂತ ನಲವಡೆ ಹಾಗೂ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ಸಿವ್ಹಿಲ್ ನ್ಯಾಯಾಧೀಶರಾದ ಸಂತೋಷ್ ಕುಂದರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.

 

ಜಿಲ್ಲಾ ಮಟ್ಟದಲ್ಲಿ ಪ್ರೊಬೊನೊ ವಕೀಲರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಪ್ರಥಮ ವ್ಯಕ್ತಿ ಎಂಬುವುದು ಇಲ್ಲಿ ಗಮನರ್ಹ ಸಂಗತಿಯಾಗಿದೆ. 


ಕಳೆದ ತಿಂಗಳ ಹಿಂದೆ ಮಲ್ಲಿಕಾರ್ಜುನ ಜಿ ಭೃಂಗಿಮಠ ಅವರ ಹೆಸರು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ರವಾನಿಸಲಾಗಿತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಜಿ ಭೃಂಗಿಮಠ ಅವರನ್ನು ಪ್ರೊಬೊನೊ ವಕೀಲರನ್ನಾಗಿ(Probono Advocate) ಎಂಪೆನಲ್ಮೆಂಟ್ ಮಾಡಿಕೊಳ್ಳಲು ನಿರ್ಧೇಶನ ಮಾಡಿತ್ತು ,ಸದರಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ನಿಯಮಾನುಸಾರ ಮಲ್ಲಿಕಾರ್ಜುನ ಜಿ ಭೃಂಗಿಮಠ ಅವರನ್ನು ಜನಹಿತಕ್ಕಾಗಿ) ಪ್ರೊಬೊನೊ ವಕೀಲರೆಂದು ನೇಮಿಸಿ ಆದೇಶ ಮಾಡಿದ್ದಾರೆ.


ಭಾರತ ಸ್ವತಂತ್ಯ್ಯವಾದ ನಂತರ ವಿಜಯಪುರ ಜಿಲ್ಲೆಯಲ್ಲಿ ಪ್ರೊಬೊನೊ ವಕೀಲರೆಂದು ನೇಮಕವಾದ ಪ್ರಥಮ ವಕೀಲರೆಂಬ ಕೀರ್ತಿಯೂ ಭೃಂಗಿಮಠ ಅವರಿಗೆ ಸಲ್ಲಿದೆ.


ಪ್ರೋಬೊನೋ ಎಂದರೆ ಇದು‌ಲ್ಯಾಟಿನ ಶಬ್ದವಾಗಿದ್ದು ಇದನ್ನು ಇಂಗ್ಲೀಷಲ್ಲಿ public good ಎಂದು ಅರ್ಥವಿದ್ದು ಕನ್ನಡಕ್ಕೆ ಜನಹಿತ (ಪ್ರೊಬೊನೊ) ವಕೀಲರು ಎಂದು ಅನುವಾದಿಸಬಹುದಾಗಿದೆ.

ಸಾಮಾನ್ಯವಾಗಿ ಪ್ರಬೊನೊ ಎಂದರೆ ಶುಲ್ಕವಿಲ್ಲದೇ ಅಥವಾ ಅತೀ ಕಡಿಮೆ ವೆಚ್ಚದಲ್ಲಿ ಸಾಮಾಜದಲ್ಲಿ ಹಣ ಖರ್ಚು ಮಾಡಲಾಗದೇ ನ್ಯಾಯ ಪಡೆಯಲಾಗದ ಜನರಿಗೆ ನ್ಯಾಯ ಕೊಡಿಸಲು ಸಿದ್ದರಾದ ವಕೀಲರು ಎಂದು ವಿಸ್ತರಿಸಬಹುದು.

ಇವರ ನೇಮಕದಿಂದ ಜಿಲ್ಲೆಯ ನೊಂದ ಜನರಿಗೆ ಪ್ರೊಬೊನೊ ವಕೀಲರ ಸೇವೆ ದೊರಕಿಸಿ ಕೊಡುವ ಅವಕಾಶ ಕಲ್ಪಿಸಿದಂತಾಗಿದೆ.


ಕಳೆದ ಎರಡು ದಶಕಗಳಿಂದ ಕಾನೂನು ಸೇವೆಗಳ ಪ್ರಾಧೀಕಾರದೊಡನೆ ಉಚಿತವಾಗಿ ಕಾನೂನು ಅರಿವು ಸೇವೆ ಮಾಡುತ್ತಾ ಬಂದ ಭೃಂಗಿಮಠರು ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕಾಲತ್ತಿನ ಫೀ ಪಡೆಯದೇ ಇರುವ ಅವರ ಸಾಮಾಜಿಕ ಕಾಳಜಿಯನ್ನು ,ಪ್ರತಿಭೆಯನ್ನು ಸಹ ಕಾನೂನು ಸೇವೆಗಳ ಪ್ರಾಧಿಕಾರ ಗಮನಿಸಿದಂತಾಗಿದೆ.

ಒಬ್ಬ ಪ್ರಸಿದ್ದ ನ್ಯಾಯವಾದಿಯಿಂದ ಬಡ ಜನರಿಗೆ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವು ಹೊರಡಿಸಿರುವ ಈ ನೇಮಕಾತಿ ನಿಜಾವಗಿಯೂ ಬಡ ಜನರಿಗೆ ಅನುಕೂಲಕರವಾಗಲಿದೆ.


ತುಂಬಾ ಬೀಜಿಯಾಗಿರುವ ಭೃಂಗಿಮಠ ಅವರ ಕಾನೂನು ಸೇವೆಯ ನಡುವೆ ಅವರನ್ನು ಪ್ರೊಬೊನೊ ವಕೀಲರನ್ನಾಗಿ ಕಾನೂನು ಸೇವೆಗಳ ಪ್ರಾಧಿಕಾರವು ಗುರಿತಿಸಿ ಪ್ರೊಬೊನೊ ವಕೀಲರ ಪಟ್ಟಿಗೆ ಸೇರ್ಪಡೆ ಮಾಡಿದ್ದು ಉತ್ತಮ ಬೆಳವಣಿಗೆಯಾಗಿದೆ.

Post a Comment

Whatsapp Button works on Mobile Device only