Clickable Image

Friday, February 23, 2024

ಕೆ.ಕೆ.ಆರ್.ಟಿ.ಸಿ. ಚಾಲಕ,ಚಾಲಕ‌-ಕಂ-ನಿರ್ವಾಹಕ ನೇಮಕಾತಿ:. ಅಂತಿಮ ಆಯ್ಕೆ ಪಟ್ಟಿ ಪ್ರಕಟ.*

 

*ಕೆ.ಕೆ.ಆರ್.ಟಿ.ಸಿ. ಚಾಲಕ,ಚಾಲಕ‌-ಕಂ-ನಿರ್ವಾಹಕ ನೇಮಕಾತಿ:*


*ಅಂತಿಮ ಅಯ್ಕೆ ಪಟ್ಟಿ ಪ್ರಕಟ, ಫೆ.26 ರಿಂದ ಸ್ಥಳ ನಿಯೋಜನೆಗೆ ಕೌನ್ಸಿಲಿಂಗ್*


ಕಲಬುರಗಿ,ಫೆ.23(ಕ.ವಾ) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ 925 ಚಾಲಕ ಹಾಗೂ 694 ಚಾಲಕ-ಕಂ-ನಿರ್ವಾಹಕ ಒಟ್ಟು 1,619 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಶುಕ್ರವಾರ ಅಂತಿಮ ಆಯ್ಕೆ ಪಟ್ಟಿಯನ್ನು ನಿಗಮದ ವೆಬ್ ಸೈಟ್ https://kkrtcjobs.karnataka.gov.in ರಲ್ಲಿ ಪ್ರಕಟಿಸಿದೆ.


ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ, ಘಟಕ ಹಂಚಿಕೆ ಪ್ರಕ್ರಿಯೆ ಇದೇ ಫೆಬ್ರವರಿ 26 ರಿಂದ‌ 28ರ ವರೆಗೆ ಕಲಬುರಗಿಯ ಕೆ.ಕೆ.ಆರ್.ಟಿ.ಸಿ ಕೇಂದ್ರ ಕಚೇರಿ ಪಕ್ಕದಲ್ಲಿನ ಆರ್ಚಿಡ್ ಮಾಲ್ ಹಿಂಭಾಗದ ನಿಗಮದ ಕಟ್ಟಡದಲ್ಲಿ (ಮೂಲ ದಾಖಲಾತಿ ಪರಿಶೀಲಿಸಿದ ಸ್ಥಳ) ಕೌನ್ಸಿಲಿಂಗ್ ಮೂಲಕ ನಡೆಸಲಾಗುತ್ತಿದ್ದು, ಆಯ್ಕೆಗೊಂಡ ಎಲ್ಲಾ ಅಭ್ಯರ್ಥಿಗಳು ತಪ್ಪದೆ ಕೌನ್ಸಿಲಿಂಗ್ ಗೆ ಹಾಜರಾಗುವಂತೆ ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.


2020ರಲ್ಲಿ ಈ 1,619 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಇದರಲ್ಲಿ 1,295 ಸ್ಥಳೀಯ ವೃಂದದ ಹುದ್ದೆಗಳು ಹಾಗೂ 141 ಪರಿಶಿಷ್ಟ ಜಾತಿ ಮತ್ತು ವರಿಶಿಷ್ಟ ಪಂಗಡಕ್ಕೆ ಸೇರಿದ ಹಿಂಬಾಕಿ (ಬ್ಯಾಕ್ ಲಾಗ್) ಹುದ್ದೆಗಳು ಸೇರಿವೆ.


ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ ಸಂಖ್ಯೆ 6366374977 ಮತ್ತು 08472-227687 ಗಳಿಗೆ ಸಂಪರ್ಕಿಸಲು  .   ಕೋರಿದೆ.

Post a Comment

Whatsapp Button works on Mobile Device only