Clickable Image

Wednesday, November 29, 2023

ಕನಕದಾಸರ ಜಯಂತಿ ಸರಳ-ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರಶಹಾಬಾದ: ಈ ಬಾರಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.


ಅವರು ನಗರದ ತಹಸೀಲ್ದಾರ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿ ನಿಮಿತ್ತ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕೇವಲ ಆಚರಣೆಗೆ ಸಿಮೀತ ಮಾಡದೇ, ಅವರ ತತ್ವಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.ಅಲ್ಲದೇ ಆಡಂಬರದ ಜಯಂತಿ ಆಚರಣೆಗೆ ಒತ್ತು ನೀಡದೇ ಅರ್ಥಪೂರ್ಣವಾದ ಆಚರಣೆ ಬದ್ಧತೆ ತೋರಬೇಕಿದೆ.ಇದೇ ನವೆಂಬರ್ 30 ರಂದು ಕನಕದಾಸರ ವೃತ್ತದಿಂದ ತಹಸೀಲ್ದಾರ ಕಚೇರಿಯವರೆಗ ಕುರುಬ ಸಮಾಜದವರು ಬಾಂಧವರು ಮೆರವಣಿಗೆ ನಡೆಸುವರು.ನಂತರ ಕಾರ್ಯಾಲಯದಲ್ಲಿ ಜಯಂತಿ ಆಚರಣೆ ಮಾಡಲಾಗುವುದೆಂದು ತಿಳಿಸಿದರು.


ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ, ಕರ್ನಾಟಕ ಪ್ರದೇಶ ಕುರುಬ ಸಮಾಜದ ಅಧ್ಯಕ್ಷ ನಿಂಗಣ್ಣ.ಸಿ. ಪೂಜಾರಿ, ಕುರುಬಗೊಂಡ ಸಮಾಜದ ಅಧ್ಯಕ್ಷ ಸಾಯಬಣ್ಣ ಕೊಲ್ಲೂರ್, ಯುವ ಕುರುಬ ಸಂಘದ ಅಧ್ಯಕ್ಷ ಸೂರ್ಯಕಾಂತ ಗಿರಣಿ, ಸಂಗೋಳ್ಳಿ ರಾಯಣ್ಣ ತಾಲೂಕಾಧ್ಯಕ್ಷ ಸುನೀಲ ಪೂಜಾರಿ, ಜಿಲ್ಲಾ ನಿರ್ದೇಶಕ ಅಶೋಕ ದೇವರಮನಿ, ಮುಖಂಡರಾದ ಮರಲಿಂಗ ಕಮರಡಗಿ, ಕಾರ್ಯಾಧ್ಯಕ್ಷ ಸಿದ್ದಲಿಂಗ ಮರತೂರ, ಖಜಾಂಚಿ ಭೀಮರಾಯ ಹಿರೇಪೂಜಾರಿ, ಮಲ್ಕಣ್ಣ ಮುದ್ದ, ವಿಜಯಕುಮಾರ ಕಂಠಿಕರ, ಮಲ್ಲಣ್ಣ ಮುತ್ತಗಿ, ನಿಂಗಣ್ಣ ಹೂಗೊಂಡ, ಕಲ್ಯಾಣಿ ಡಿಶ್, ಈಶ್ವರ ಭೀರನೂರ ಮಹೇಶ ಟಿಕಾಳೆ, ಅಪ್ಪಸಾಬ ಮರತೂರ ಸೇರಿದಂತೆ ಅನೇಕರು ಇದ್ದರು.

Post a Comment

Whatsapp Button works on Mobile Device only