Clickable Image

Thursday, November 9, 2023

ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ
ತು. ವಿನೂತನ ಪ್ರಯೋಗ


 ಶಹಾಬಾದ್:- ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆಯ ರೀತಿಯಲ್ಲಿ ಪಕ್ಕಾ ಹಳ್ಳಿ ಜನರ ಉಡುಪು ಧರಿಸಿ ಮಕ್ಕಳು ತಾವು ತಂದ ವಿವಿಧ ತಿಂಡಿ ತಿನಿಸುಗಳನ್ನು ಮಾರುತ್ತಿರುವ ರೀತಿ ನೋಡಿ ಸಂತೆಗೆ ಬಂದ ಎಲ್ಲರನ್ನು ಬೆರಗುಗೊಳಿಸುವಂತಿತ್ತು. ಹೌದು ಇಂತಹ ಪ್ರಯೋಗವೊಂದು ನಡೆದಿದ್ದು 


ರಾವೂರ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯು ನೋಡುಗರ ಗಮನ ಸೆಳೆಯಿತು. ಮಕ್ಕಳ ಶೈಕ್ಷಣಿಕ ಬೆಳವಣಿಗಾಗಿ ಸದಾ ಒಂದಿಲ್ಲ ಒಂದು ಹೊಸತನದ ಪ್ರಯೋಗ ಮಾಡುವ ಈ ಶಾಲೆ ಮಕ್ಕಳ ಸಂತೆಯಿದ ಗಮನ ಸೆಳೆದಿದೆ. ಮಕ್ಕಳಲ್ಲಿ ಈ ಹಂತದಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು ಮತ್ತು ಅರ್ಥಶಾಸ್ತçದ ವಿವಿಧ ಪರಿಕಲ್ಪನೆಗಳನ್ನು ಮೂಡಿಸಲು ಹಮ್ಮಿಕೊಂಡಿದ್ದ ಈ ಪ್ರಯೋಗ ಜನಸಾಗರವನ್ನು ಸೇರಿಸುವಲ್ಲಿ ಯಶಸ್ವಿಯಾಯಿತು. ತರಕಾರಿ,ಹಣ್ಣು, ಕಾಳುಗಳು, ತಹರೆವಾರಿ ತಿಂಡಿ ತಿನಿಸುಗಳು, ಹೆಣ್ಣು ಮಕ್ಕಳ ಅಲಂಕಾರಿಕ ವಸ್ತುಗಳು, ಚಾಟ್ ಪದಾರ್ಥಗಳು, ಸೀರೆ ವ್ಯಾಪಾರ, ಬಟ್ಟೆ ವ್ಯಾಪಾರ, ಹೊಟೆಲ್‌ಗಳು, ಮನೋರಂಜನಾ ಆಟಗಳು, ಐಸ್‌ಕ್ರೀಮ್, ಹೀಗೆ ಎಲ್ಲಾ ರೀತಿಯ ವಸ್ತುಗಳು ಮಾರುಕಟ್ಟೆಯಲ್ಲಿ ಮಕ್ಕಳಿಂದ ಮಾರಲ್ಪಟ್ಟವು. ಮಕ್ಕಳ ಪಾಲಕರು-ಪೋಷಕರು,ಗ್ರಾಮಸ್ಥರು,ವಿವಿಧ ಶಾಲೆಗಳ ಮಕ್ಕಳು ಶಿಕ್ಷಕರು ಮಕ್ಕಳ ಸಂತೆಗೆ ತಂಡ ತಂಡವಾಗಿ ಬಂದು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ತಮ್ಮ ಮಕ್ಕಳ ವ್ಯಾಪಾರ ಮಾಡುವ ರೀತಿ ನೋಡಿ ಸ್ವತ: ಪಾಲಕರೇ ಬೆರಗುಗೊಂಡರು. ನಿಜಕ್ಕೂ ಇಂತಹ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿಯುತ್ತಿರುವುದಕ್ಕೆ ಸಾರ್ಥಕತೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಪರ್ಧೆಗಿಳಿದಂತೆ ತಾವು ತಂದತಹ ವಸ್ತು ಅಥವಾ ಪದಾರ್ಥಗಳೆಲ್ಲವನ್ನು ಮಾರಿ ಭರ್ಜರಿ ವ್ಯಾಪಾರ ಮಾಡಿ ಲಾಭ ಗಿಟ್ಟಿಸಿಕೊಂಡರು.

ಮಕ್ಕಳ ವ್ಯಾಪಾರವನ್ನು ಕಂಡು ಅಧಿಕಾರಿ ವರ್ಗದವರು,ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ರೀತಿಯಲ್ಲಿ ವ್ಯಾಪಾರ ಮಾಡಿದ ಮತ್ತು ಲಾಭ ಗಳಿಸಿದ ಹತ್ತು ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

 ಮಕ್ಕಳ ಸಂತೆಯನ್ನು ಶಹಾಬಾದ್ ತಹಸೀಲ್ದಾರ್ ಗುರುರಾಜ ಸಂಗಾವಿ ಉದ್ಘಾಟಿಸಿದರು. ಗ್ರಾ.ಪಂ ಅದ್ಯಕ್ಷೆ ಸುಮಿತ್ರಾ ತುಮಕೂರ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ, ಸಂಸ್ಥೆಯ ಉಪಾದ್ಯಕ್ಷ ಚೆನ್ನಣ್ಣ ಬಾಳಿ,ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಎನ್‌ಜಿಓ ಅಧ್ಯಕ್ಷರಾದ ಬಸವರಾಜ ಬಳುಂಡಗಿ, ಈರಣ್ಣ ಕೆಂಬಾವಿ,ಚಿದಾನದ ಕುಡನ್, ಶ್ರೀದೇವಿ ಅಲ್ಲಿಪುರ, ಈಶ್ವರ ಬಾಳಿ, ಅಣ್ಣಾರಾವ ಬಾಳಿ, ಅಬ್ದುಲ್ ಸಲೀಂ ಪ್ಯಾರೆ,ಗುರುನಾಥ ಗುದುಗಲ್, ಸಿ.ಆರ್.ಪಿ ಕವಿತಾ ಸಾಲೋಕಿ,ಪ್ರಾಚಾರ್ಯ ಕೆ.ಐ.ಬಡಿಗೇರ, ಸಿದ್ಧಲಿಂಗ ಬಾಳಿ, ಮಹೇಶ ಬಾಳಿ ಸೇರಿದಂತೆ ಹಲವರು ಉಪ್ಥಿತರಿದ್ದರು.


ಭಾಗ್ಯ ತಂದೆ ಸಿದ್ಧಪ್ಪ (10ನೇ ವಿಧ್ಯಾರ್ಥಿನಿ) : ಮಕ್ಕಳ ಸಂತೆ ಹಮ್ಮಿಕೊಂಡಿದ್ದು ತುಂಬಾ ಖುಷಿಯಾಗಿದೆ. ನಮ್ಮಲ್ಲಿರುವ ಸಾಮಾರ್ಥ್ಯವನ್ನು ಹೊರಹಾಕಲು ಇದೊಂದು ಉತ್ತಮ ವೇದಿಕೆಯಾಗಿದೆ. ನಾನು ಸಂತೆಯಲ್ಲಿ ಸೀರೆ ವ್ಯಾಪಾರ ಮಾಡಿ ಉತ್ತಮ ಲಾಭ ಮಾಡಿದ್ದೇನೆ. ತುಂಬಾ ಧನ್ಯವಾದಗಳು ನಮ್ಮ ಶಿಕ್ಷಕರಿಗೆ ಇಂತಹ ಒಂದು ಪ್ರಯೋಗ ಮಾಡಿದ್ದಕ್ಕೆ.


ಸಿದ್ದಲಿಂಗ ಬಾಳಿ (ಮಕ್ಕಳ ಸಂತೆಯ ಸಂಯೋಜಕರು) : ಮಕ್ಕಳಲ್ಲಿ ಕ್ರೀಯಾಶೀಲತೆ ಬೆಳೆಸಲು ಇಂತಹ ಪ್ರಯೋಗಗಳು ಅವಶ್ಯಕ. ಮಕ್ಕಳ ಜ್ಞಾನವಿಕಾಸದ ಜೊತೆಗೆ ಅರ್ಥಶಾಸ್ತçದ ಪರಿಕಲ್ಪನೆಗಳನ್ನು ಪ್ರಾತ್ಯಕ್ಷಿಕವಾಗಿ ಮಕ್ಕಳಲ್ಲಿ ಮೂಡಿಸುವಲ್ಲಿ ಇಂತಹ ಸಂತೆಗಳು ಸಹಕಾರಿ. ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶಿರ್ವಾದ,ಆಡಳಿತ ಮಂಡಳಿತ ಸಹಕಾರ, ಮತ್ತು ನಮ್ಮ ಶಿಕ್ಷಕರ ಸಹಕಾರದಿಂದ ಇಂತಹ ಪ್ರಯೋಗ ಯಶಸ್ವಿಯಾಗಿದೆ.


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only