Clickable Image

Wednesday, November 15, 2023

ಕಾಲುವೆಯಿಂದ ಎಲ್ಲಾ ಕೆರೆಗಳಿಗೆ ಕೃಷ್ಣಾ ನೀರು — ರುದ್ರವಾಡಿ ಇಂಡಿ.ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆ ೭೦ ಕಿ.ಮಿ ಯಿಂದ


೧೭೨ ಕಿ.ಮಿ ಮುಖ್ಯ ಕಾಲುವೆವರೆಗೆ ನೀರು ಹರಿಯುತ್ತಿದ್ದು ಮುಖ್ಯ ಕಾಲುವೆಯ ಸಮೀಪ ಇರುವ ಎಲ್ಲಾ ಕೆರೆಗಳನ್ನು ತುಂಬಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಭಿಯಂತರ ಎಸ್.ಆರ್.ರುದ್ರವಾಡಿ ತಿಳಿಸಿದ್ದಾರೆ.

ಇಂಡಿ ಮುಖ್ಯ ಕಾಲುವೆಯಿಂದ ಸಂಗೋಗಿ,ಹಂಜಗಿ, ಅರ್ಜನಾಳ ಮತ್ತು ಚಡಚಣ ತಾಲೂಕಿನ ಲೋಣಿ ಬಿ.ಕೆ, ಕೆರೆ ತುಂಬುವ ಕ್ರಿಯೆ ಚಾಲನೆಯಲ್ಲಿದೆ.

 ಸಂಗೋಗಿ ಕೆರೆ ಪೂರ್ತಿ ತುಂಬಿದ್ದು ಇಂಡಿ ತಾಲೂಕಿನ ೨೭ ಗ್ರಾಮಗಳ ಮತ್ತು ಜನವಸತಿ ಕೇಂದ್ರಗಳು ಮತ್ತು ವಿಜಯಪುರ ತಾಲೂಕಿನ ೫೦ ಗ್ರಾಮಗಳಿಗೆ ನೀರು ಒದಗಿಸಲಿದೆ.

ಹಂಜಗಿ ಕೆರೆಯಿಂದ ೩೪ ಗ್ರಾಮಗಳಲ್ಲಿ ಮತ್ತು ಅಡವಿ ವಸತಿ ಮತ್ತು ತಾಂಡಾ ಗಳಿಗೆ,ಲೋಣಿ ಕೆಡಿ ಕೆರೆಯಿಂದ ೨೨ ಮತ್ತು ಅರ್ಜನಾಳ ಕೆರೆಯಿಂದ ೪೨ ಗ್ರಾಮಗಳು ಮತ್ತು ಜನ ವಸತಿಕೇಂದ್ರಗಳಿಗೆ ನೀರು ಪೂರೈಸಲಾಗುವದು.

ಕೃಷ್ಣಾ ಕಾಲುವೆಯಿಂದ ನಾದ ಕೆಡಿ,ಇಂಗಳಗಿ,ಗೋಳಸಾರ,ಭತಗುಣಕಿ,ಹಲಸಂಗಿ,ಹಾವಿನಾಳ,ಅರ್ಜನಾಳ, ಭ್ಯುಯ್ಯಾರ ಹಳ್ಳದಲ್ಲಿ ನೀರು ಹರಿದು ಭೀಮಾ ನದಿ ಸೇರುತ್ತದೆ.

ಇದರಿಂದ ಕಾಲುವೆ ಮತ್ತು ಹಳ್ಳ ತೀರದ ಗ್ರಾಮಗಳಲ್ಲಿಯ ಬೋರ್ ವೆಲ್, ತೆರೆದ ಬಾವಿ ಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ.ಮತ್ತು ಜಲ ಮೂಲಗಳು ಹೆಚ್ಚಾಗಲಿವೆ.


ಕೋಟ್- 

ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರ ವಿನಂತಿಯ ಮೇರೆಗೆ ಕೃಷ್ಣಾ ಕಾಲುವೆ ಹತ್ತಿರದ ಕೆರೆಗಳನ್ನು ತುಂಬಲಾಗುತ್ತಿದೆ.ಕೆಬಿಜೆಎನ್‌ಎಲ್ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕಾರ್ಯ ಮಾಡಿದ ಪ್ರಯತ್ನದಿಂದ ಕಾಲುವೆಯಿಂದ ಕೆರೆ ತುಂಬಲಾಗುತ್ತಿದೆ.  

ಮನೋಜಕುಮಾರ ಗಡಬಳ್ಳಿ ಅಧಿಕ್ಷಕ ಅಭಿಯಂತರರು ರಾಂಪೂರ

ಫೋಟೋ- ೧೩ ಇಂಡಿ ೦೧ ಮನೋಜಕುಮಾರ

ಕೋಟ್ 

ಕೃಷ್ಣಾ ಮುಖ್ಯ ಕಾಲುವೆಯಿಂದ ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ಮತ್ತು ತಾಲೂಕಿನ ಎಲ್ಲಾ ಹಳ್ಳಗಳಲ್ಲಿ ನೀರು ಹರಿಯುವಂತೆ ಸಭೆಯಲ್ಲಿ ಚರ್ಚಿಸಿದಂತೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಇವರಿಗೆ ತಿಳಿಸಿಲಾಗಿದೆ.ಮತ್ತು ಎಲ್ಲಾ ಜಿ.ಪಂ ಗ್ರಾ.ಪಂ ಅಧಿಕಾರಿಗಳಿಗೆ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲು ತಿಳಿಸಲಾಗಿದೆ. 


ಫೋಟೋ- ೧೩ ಇಂಡಿ ೦೧ ರಾಹುಲ್ ಶಿಂಧೆ ಸಿಇಒ ವಿಜಯಪುರ 

ಫೋಟೋ- ೧೩ ಇಂಡಿ ೦೧

ಇಂಡಿ ತಾಲೂಕಿನ ಹಂಜಗಿ ಕೆರೆ  

.

Post a Comment

Whatsapp Button works on Mobile Device only