ಇಂಡಿ ಶಾಸಕ ಯಶವಂತರಾಯಗೌಡ ಕ್ಷಮೆ ಯಾಚಿಸಲಿ : ಪ್ರಶಾಂತ್ ಗೌಡ ಪಾಟೀಲ್ ಆಗ್ರಹ!
ಬೆಳಗಾವಿ ಜಿಲ್ಲೆಯಲ್ಲಿ ಸತತ 9 ದಿನಗಳ ರೈ
ತರು ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹವು. ರೈತ ಬೆಳೆದ ಕಬ್ಬಿನ ಬೆಲೆ ಪ್ರತಿ ಟನ್ ಗೆ ರೂ.₹3500 ಬೇಡಿಕೆ ಇಟ್ಟು ಮಳೆ ಲೆಕ್ಕಿಸದೆ ಚಳಿಯ ವಾತಾವರಣ ಲೆಕ್ಕಿಸದೆ ಸುಡುವ ಬಿಸಿಲಿನಲ್ಲಿ ನಿರಂತರ 9 ದಿನಗಳ ಧರಣಿ ಸತ್ಯಾಗ್ರಹದಲ್ಲಿ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗ್ತಾ ಇಲ್ಲ ಎಂದು ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಾ ಇಲ್ಲ ಎಂದು ನಡು ಬೀದಿಯಲ್ಲಿ ರಸ್ತೆ ತಡೆದು ರೈತ ಪರ ಸಂಘಟನೆಗಳೊಂದಿಗೆ ಸಾವಿರಾರು ರೈತರು ಹೋರಾಟ ಮಾಡುತ್ತಿದ್ದಾರೆ ಆದರೆ ಆಶ್ಚರ್ಯಕರ ಘಟನೆ ಏನಂದರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಾಸಕರಾದ ಯಶವಂತರಾಯ ಗೌಡ ಪಾಟೀಲ್ ರವರು ನಾನು ಎಂಬ ದರ್ಪದ ಮೇರೆಗೆ ಅವರು ಆ ಪ್ರತಿಭಟನೆಯಲ್ಲಿ ಯಾರೂ ರೈತರೇ ಇಲ್ಲ ಅಂತಾರೆ ಮತ್ತೆ ಯಾರಿದ್ದಾರೆ ಅಲ್ಲಿ ಅಂತ ನನ್ನ ಪ್ರಶ್ನೆ ಈ ಪ್ರತಿಭಟನೆ ಹೇಗೆ ಹತ್ತುಕ್ಬೇಕು ಅಂತ ನನಗೆ ಗೊತ್ತಿದೆ 10 ಸಾವಿರ ಜನ ತಂದು ನಮ್ಮ ಕಾರ್ಖಾನೆ ಪ್ರಾರಂಭ ಮಾಡ್ತೇನೆ ಅಂತ ಸೊಕ್ಕಿನಿಂದ ರೈತರ ವಿರುದ್ಧ ದರ್ಪ ತೋರಿಸುತ್ತಿದ್ದಾರೆ ಶಾಸಕ ಯಶವಂತರಾಯ ಗೌಡ ಪಾಟೀಲ್ ಶೀಘ್ರವೇ ರೈತರಿಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಳು ಇಂಡಿ ತಾಲೂಕಿನಲ್ಲಿರುವ ಮರಗೂರು ಬಳಿ ಇರುವ ನಿಮ್ಮ ಭೀಮಾಶಂಕರ್ ಕಬ್ಬಿನ ಕಾರ್ಖಾನೆಗೆ ಮುತ್ತಿಗೆ ಹಾಕಿ ಬೀಗ ಜಡೆದು ಜೊತೆಯಲ್ಲೇ ನಿಮ್ಮ ಮನೆಗೂ ಕೂಡ ಮುತ್ತಿಗೆ ಹಾಕುವ ಸಂದರ್ಭ ಬರಬಹುದು ಅಂತ ಕರ್ನಾಟಕ ರಾಜ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿ ಪಾಟೀಲ್ ಆಗ್ರಹಿಸಿದರು
Post a Comment