Clickable Image

Monday, November 10, 2025

ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಜ್ಜಾದ ಮೂವರು ಕಾಶ್ಮೀರಿ ವೈದ್ಯರು ಸೇರಿ ಎಂಟು ಉಗ್ರರ ಬಂಧನ.

 ಶ್ರೀನಗರ/ಫರೀದಾಬಾದ್‌: ಕೆಮಿಕಲ್ ಬಾಂಬ್ ದಾಳಿಗೆ ಸಜ್ಜಾಗಿದ್ದ ಉಗ್ರನೊಬ್ಬ ಗುಜರಾತ್‌ನಲ್ಲಿ ಸೆರೆ ಸಿಕ್ಕ ಬೆನ್ನಲ್ಲೇ ದೇಶವ್ಯಾಪಿ ಕಂಡುಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ ಮೂವರು ಕಾಶ್ಮೀರಿ ವೈದ್ಯರು ಸೇರಿದಂತೆ 8 ಉಗ್ರರ ಜಾಲವನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆಬಂಧಿತರಿಂದ 2900 ಕೆಜಿಯಷ್ಟು ಭಾರೀ ಸ್ಫೋಟಕ, ಮದ್ದು, ಗುಂಡು, ಪಿಸ್ತೂಲ್‌, ಗನ್‌, ಸೂಟ್‌ಕೇಸ್‌, ಬ್ಯಾಟರಿ, ಟೈಮರ್‌, ವಾಕಿಟಾಕಿ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಜೈಷ್‌ ಎ ಮೊಹಮ್ಮದ್‌ ಮತ್ತು ಅನ್ಸರ್‌ ಘಜ್ವತ್‌ ಉಲ್‌ ಹಿಂದ್‌ ಸಂಘಟನೆಗೆ ಸೇರಿದವರಾಗಿದ್ದಾರೆ.



ಪ್ರಕರಣ ಬೆಳಕಿಗೆ ಹೇಗೆ?:

ಅ.19ರಂದು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಪೊಲೀಸರು ಮತ್ತು ಸೇನೆಗೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ಜೈಷ್‌ ಎ ಮೊಹಮ್ಮದ್‌ ಸಂಘಟನೆ ಹೆಸರಲ್ಲಿ ಗೋಡೆಗಳಿಗೆ ಅಂಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಈ ಕೃತ್ಯದಲ್ಲಿ ವಿದ್ಯಾವಂತರು, ಉನ್ನತ ವೇತನ ಪಡೆಯುವ ವ್ಯಕ್ತಿಗಳು, ವಿದ್ಯಾರ್ಥಿಗಳು ಭಾಗಿಯಾಗಿದ್ದು ಕಂಡುಬಂದಿತ್ತು. ಜೊತೆಗೆ ಇವರೆಲ್ಲಾ ಪಾಕಿಸ್ತಾನ ಮೂಲದ ವ್ಯಕ್ತಿಗಳ ಸೂಚನೆ ಅನ್ವಯ ಕಾರ್ಯನಿರ್ವಹಣೆ ಮಾಡುತ್ತಿದ್ದದ್ದು ಕಂಡುಬಂದಿತ್ತು.

Post a Comment

Whatsapp Button works on Mobile Device only