ಗುಲ್ಬರ್ಗಾ: ಟಿಂಮಾಪುರಿ ಸರ್ಕಲ್ ಬಳಿ ಅನಾಮಿಕ ವ್ಯಕ್ತಿಯ ಶವ ಪತ್ತೆ
ಗುಲ್ಬರ್ಗಾ ನಗರದ ಟಿಂಮಾಪುರಿ ಸರ್ಕಲ್ ಹತ್ತಿರ ಜಿಡಿಎ ಆಫೀಸ್ ಎದುರು ಒಬ್ಬ ಅನಾಮಿಕ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.
ಈ ಬೆಳಗ್ಗೆ ಟಿಂಮಾಪುರಿ ಸರ್ಕಲ್ ಬಳಿ ಜನರು ಶವವನ್ನು ಕಂಡು, ತಕ್ಷಣವೇ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಶವದಲ್ಲಿ ಯಾವುದೇ ಗುರುತು ಸಿಗಲಿಲ್ಲ. ಸ್ಥಳೀಯರು ಈ ವ್ಯಕ್ತಿ ಆ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದನೆಂದು ತಿಳಿಸಿದ್ದಾರೆ.
ಸ್ಥೇಶನ್ ಬಜಾರ್ ಪೊಲೀಸರ ತಂಡ ಶವವನ್ನು ಸರ್ಕಾರದ ಜನರಲ್ ಹಾಸ್ಪಿಟಲ್‌ಗೆ ಕಳುಹಿಸಿ, ಗುರುತು ಪತ್ತೆಗಾಗಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
Post a Comment