ಕಲಬುರಗಿ :ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಕಲ್ಬುರ್ಗಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಅಫ್ಜಲ್ಪುರ್ ಘಟಕದ ಬಸ್ ಒಂದನ್ನು ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ್ ಪಗಡೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸರ್ಕಾರಿ ಬಸ್ ಅನ್ನು ಇಷ್ಟೊಂದು ಸುಂದರವಾಗಿ ಜಗಮಗಿಸುವಂತೆ ತಯಾರು ಮಾಡಿದ ವಾಹನ ಚಾಲಕ ನಾಗಪ್ಪ ಮತ್ತು ನಿರ್ವಾಹಕ ಸೂರ್ಯಕಾಂತ್ ಅವರಿಗೆ ಅಭಿನಂದನೆ ತಿಳಿಸಿದರು.ನಂತರ ವಾಹನ ಚಾಲಕ ನಾಗಪ್ಪ ಮಾತನಾಡಿ ಕನ್ನಡ ನಾಡಿನಲ್ಲಿ ಬದುಕುವ ನಾವು ಮೊದಲು ಕನ್ನಡ ಮಾತನಾಡಬೇಕು ಮತ್ತು ಕನ್ನಡ ಉಳಿಸುವ ಕೆಲಸ ಮಾಡಬೇಕು ಎಂದರು, ನಂತರ ನಿರ್ವಾಹಕ ಸೂರ್ಯಕಾಂತ್ ಮಾತನಾಡಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ನನ್ನ ಉಸಿರು ಇರುವವರೆಗೂ ಕನ್ನಡಕ್ಕಾಗಿ ಬದುಕುತ್ತೇನೆ ಎಂದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ್ ಪಗಡೆ, ಚಾಲಕ ನಾಗಪ್ಪ, ನಿರ್ವಾಹಕ ಸೂರ್ಯಕಾಂತ್ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿಯ ನಿರ್ದೇಶಕ ಶ್ರೀಶೈಲ ಪಗಡೆ ಮತ್ತು ಕನ್ನಡದ ಅಭಿಮಾನಿಗಳು ಉಪಸ್ಥಿತರಿದ್ದರು.
Post a Comment