ಇಂದು ಕಲ್ಯಾಣ ಕರ್ನಾಟಕ ಸುದ್ದಿವಾಹಿಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ -2 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಕಚೇರಿಯಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ್, ಮತ್ತು ಮಹಾಂತೇಶ್ವರ ಮಠದ ಪೀಠಾಧಿಪತಿ ಶ್ರೀ ಷಟಸ್ಥಲ ಬ್ರಹ್ಮ ವೀರ ಮಹಾಂತ ಶಿವಾಚಾರ್ಯರು ಶಸಿಗೆ ನೀರು ಉಣಿಸುವುದರ ಮೂಲಕ ನೆರವೇರಿಸಿದರು, ನಂತರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಜರಗಿತು, ಈ ಸಂದರ್ಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮ ವೀರಮಹಂತ ಶಿವಾಚಾರ್ಯರು ಮಾತನಾಡಿ ಈ ವಿಶೇಷ ಕಾರ್ಯಕ್ರಮ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತರಿಗೆ ಅದ್ಭುತ ವೇದಿಕೆಯಾಗಿದ್ದು ಹೆಚ್ಚೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಪರಮಪೂಜಾ ಹವಾ ಮಲ್ಲಿನಾಥ್ ಮಹಾರಾಜ್ ನೀರಗುಡಿ, ಮಾಂತೇಶ್ವರ ಮಠದ ಪೀಠಾಧಿಪತಿ ಶ್ರೀ ಷಟಸ್ಥಲ ಬ್ರಹ್ಮ ವೀರ ಮಹಾಂತ ಶಿವಾಚಾರ್ಯರು ಹಾಗೂ ಸುದ್ದಿ ವಾಹಿನಿಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ಪಗಡೆ, ಕಲಾವಿದ ಗುಡ್ಡಣ್ಣ ಡಿಗಿ, ಜೈ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ , ಜೈ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಕೋರಳ್ಳಿ, ಕಾಂಗ್ರೆಸ್ ಮುಖಂಡ ರೇವಣಸಿದ್ದಪ್ಪ ನಾಗುರೆ, ಪ್ರಧಾನ ಸಂಪಾದಕ ಮಲ್ಲಿಕಾರ್ಜುನ ಪಗಡೆ, ನಿರ್ದೇಶಕ ಶ್ರೀಶೈಲ ಪಗಡೆ, ಮುಕೇಶ್ ಮುನ್ನೋಳಿ,ರಾಜಶೇಖರ್ ಮಾತುಳಿ, ಚನ್ನು ಹಿಂಚಿಗೇರಿ, ಎಲ್ಲಾ ಲಿಂಗ ಪೂಜಾರಿ, ಚಂದ್ರಶೇ ಗೌಡ ಮಾಲಿಪಾಟೀಲ್, ಮಾಂತೇಶ ರೋಜೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment