ಕಲಬುರಗಿ :ನಿನ್ನೆ ತಡ ರಾತ್ರಿ ಸುಮಾರು 12 ಗಂಟೆಗೆ ಕಲ್ಬುರ್ಗಿ ನಗರದ ಖಾದ್ರಿ ಚೌಕ್ ಬಳಿ ಅನ್ಯ ಕೋಮುವಿನ ಯುವಕರಿಂದ ಹಿಂದೂ ಯುವಕರ ಮೇಲೆ ಮರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಜಾಗತಿ ಸೇನೆ ಕಲ್ಬುರ್ಗಿ ಜಿಲ್ಲಾ ದಕ್ಷ ಲಕ್ಷ್ಮಿಕಾಂತ ಸ್ವಾದಿ ಆರೋಪಿಸಿದ್ದಾರೆ. ತಡ ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಆಳಂದ ಚೆಕ್ ಪೋಸ್ಟ್ ಇಂದ ಹಿಂದೂ ಯುವಕರು ಬೈಕ್ ಮೇಲೆ ಬರುತ್ತಿದ್ದರು ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹ ಇದ್ದರೂ ಆದರೆ ಖಾದ್ರಿ ಚೌಕ್ ಸಮೀಪಿಸುತ್ತಿದ್ದಂತೆ ಸುಮಾರು 30 ರಿಂದ 40 ಯುವಕರ ಗುಂಪೊಂದು ಹಿಂದೂ ಯುವಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾತ್ರಿ ಕೂಡಲೇ ಹಲ್ಲೆಗೆ ಒಳಗಾದ ಯುವಕರನ್ನ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಳಕ್ಕೆ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈಗಾಗಲೇ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗುತ್ತಿದೆ....
Post a Comment