Clickable Image

Monday, December 25, 2023

ಚಿತ್ತಾಪುರ: ಮಂಗಗಳ ದಾಳಿಗೆ ಇಬ್ಬರು ಮಹಿಳೆಯರಿಗೆ ಗಾಯ

 ಚಿತ್ತಾಪುರ: ಮಂಗಗಳ ದಾಳಿಗೆ ಇಬ್ಬರು ಮಹಿಳೆಯರಿಗೆ ಗಾಯ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಮಂಗಗಳ ಕಡಿತಕ್ಕೆ ಗುರಿಯಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಹಿಳೆಯರ ಮನೆಗೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.


ಗಾಯಾಳು ಲಕ್ಷ್ಮಿಬಾಯಿ ಸಿದ್ದಪ್ಪ, ಅನೀತಾ ಚವ್ಹಾಣ ಅವರನ್ನು ಮಾತನಾಡಿಸುವ ಮೂಲಕ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ನಂತರ ಮಂಗಗಳ ವಿಪರೀತ ಹಾವಳಿ ದೂರಿನ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸುತ್ತಾಡಿ ಸಾರ್ವಜನಿಕರ ಅಭಿಪ್ರಾಯ ಪಡೆದರು.

Post a Comment

Whatsapp Button works on Mobile Device only