Clickable Image

Tuesday, December 19, 2023

ಕಲ್ಬುರ್ಗಿ ಇಂದ ಬೆಂಗಳೂರಿಗೆ ಎರಡು ನೂತನ ಟ್ರೈನ್ ಸಂಚಾರಕ್ಕೆ ಕರವೆ ಅಗ್ರಹ

 ಕರ್ನಾಟಕ ರಕ್ಷಣಾ ವೇದಿಕೆ ಟಿಎ ನಾರಾಯಣಗೌಡ್ರ ಬಣದಿಂದ ಎಂದು ಕಲ್ಬುರ್ಗಿ ರೈಲ್ವೇ ನಿಲ್ದಾಣದ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲೆ ಘಟಕದ ವತಿಯಿಂದ ಸಾಂಕೇತಿಕ ಧರಣಿ ನಡೆಸಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಪುನೀತ್ ರಾಜ್ ಸಿ ಕವಡೆ ಕಲ್ಬುರ್ಗಿಯಿಂದ ಬೆಂಗಳೂರಿಗೆ ದಿನಪತ್ರಿಕೆ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಜನಸಾಮಾನ್ಯರು ದುಬಾರಿ ಹಣ ಕೊಟ್ಟು ಮಧ್ಯವರ್ತಿಗಳಿಂದ ಟಿಕೆಟ್ ಪಡೆದುಕೊಂಡು ಪ್ರಯಾಣಿಸುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಕಲ್ಬುರ್ಗಿಯ ಜಿಲ್ಲೆಯ ಜನತೆಗೆ ರೋಷಿ ಹೋಗಿದ್ದು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಸ್ಪಂದನೆ ನೀಡದಿರುವುದು ನಾಚಿಕೆಗೇಡಿನ ಸಂಗತಿ, ಆದ್ದರಿಂದ ಕಲ್ಬುರ್ಗಿಯಿಂದ ಬೆಂಗಳೂರಿಗೆ ನಿತ್ಯ ಎರಡು ನೂತನ ರೈಲುಗಳು ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ಕಾಶಿ ಜಿಲ್ಲಾಧ್ಯಕ್ಷ ಪುನೀತ್ ರಾಜ್ ಕವಡೆ, ದೇವಿಂದ್ರ, ವಿಠ್ಠಲ್ ಪೂಜಾರಿ, ಗುರುದೇವ ಪೂಜಾರಿ, ಸುನಿಲ್ ವಾರೇಕ್, ದೇವಿಂದ್ರ ಪಾಟಿಲ್, ಚಂದ್ರ ಚವಾನ್, ಸಚಿನ್ ಚವಾನ್, ಅರುಣ್ ಹೆರೂರ್, ಎಲ್ಲಾ ಲಿಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು..Post a Comment

Whatsapp Button works on Mobile Device only