Clickable Image

Saturday, November 18, 2023

ರೇವಣಸಿದ್ದೇಶ್ವರ ಲಕ್ಷ ದೀಪೋತ್ಸವ



ಇಂಡಿ:ಅಂಧಕಾರ ಹೋಗಲಾಡಿಸಿ, ಜ್ಞಾನದ ದೀಪ ಎಲ್ಲರ ಮನ,ಮನೆಗಳಲ್ಲಿ ಬೆಳಗಲಿ ಎಂದು ತಡವಲಗಾ ರಾಚೋಟೇಶ್ವರ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.

 ತಾಲೂಕಿನ ಹೊರ್ತಿ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಹಳೇ ದೇವಸ್ಥಾನದ ಆವರಣದಲ್ಲಿ ದೀಪಾವಳಿಯ ಕಾರ್ತಿಕ ಮಾಸದ ಅಂಗವಾಗಿ ಮಂಗಳವಾರ ೭ನೇ ವರ್ಷದ ಲಕ್ಷ ದೀಪೋತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಾವೆಲ್ಲರೂ ಒಂದು ಎಂಬ ಮನೋಭಾವದಿಂದ ಜೀವನ ನಡೆಸಬೇಕು.ನಮ್ಮ ಬದುಕಿನ ಆಸೆಗೆ ಮೀತಿ ಎಂಬುದು ಇಲ್ಲ ಆದ್ದರಿಂದ ಇದ್ದುದ್ದರಲ್ಲೇ ಸುಂದರ ಜೀವನ ಕಂಡುಕೊಳ್ಳಬೇಕು ಎಂದರು.ಜಗದ್ಗುರು ರೇವಣಸಿದ್ಧೇಶ್ವರರ ಈ ಹೊರ್ತಿ ಪುಣ್ಯ ಕ್ಷೇತ್ರದ ಆವರಣದಲ್ಲಿ ಈಗಾಗಲೇ ೧೩೭ಅಡಿ ಎತ್ತರದ ಬೃಹದಾಕಾರದ ಬೃಹತ್ ಶಿವಲಿಂಗದ ಕಟ್ಟಡ  ಭರದಿಂದ ನಡೆಯುತ್ತಿದೆ. ಈ ಬೃಹದಾಕಾರದ ಶಿವಲಿಂಗದೊಳಗೆ ೧೨ಜ್ಯೋರ್ತಿಲಿಂಗಗಳು ಮತ್ತು ಶ್ರೀ(೩)ಕೋಟಿ ಲಿಂಗಗಳ ಸ್ಥಾಪನೆಯಾಗಿ ಇದೊಂದು ಯಾತ್ರಾತ್ರಿಗಳ ಐತಿಹಾಸಿಕ ತಾಣವಾಗಲಿದೆಎಂದರು.

ಕನ್ನೂರು ಗುರುಮಠದ ಷ.ಬ್ರ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.

 ಪುಣೆಯ ಮೀಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಮಚಂದ್ರ ವಿ.ಪೂಜೇರಿ ಮಾತನಾಡಿದರು.

 

ಹೊರ್ತಿ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಅಣ್ಣಪ್ಪಸಾಹುಕಾರ ಖೈನೂರ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಪ್ರೋ: ಎಸ್.ಎಸ್.ಪೂಜಾರಿ, ಶ್ರೀಮಂತ ಇಂಡಿ, ಗುರಣಗೌಡ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ಪೂಜಾರಿ, ಜನಗೂಂಡ ಪೂಜಾರಿ, ರಾಮಚಂದ್ರ ಪೂಜಾರಿ, ಶಿವಲಿಂಗಪ್ಪ ಪೂಜಾರಿ, ರೇವಣಸಿದ್ದ ಪೂಜಾರಿ, ಮಲ್ಲು ಭೋಸಗಿ, ರೇವಣಸಿದ್ದ ಪೋಜಾರಿ, ಶಿವಾನಂದ ಮೇತ್ರಿ, ಪ್ರಕಾಶ ಬಮ್ಮನಳ್ಖಿ, ಬಸವರಾಜ ಜಂಬಗಿ, ಪವನ ಕುಲರ‍್ಣಿ. ವಿಶ್ವನಾಥ ಜಂಗಮಶೆಟ್ಟಿ, ಶರಣು ಡೋಣಗಿ, ಬಸವರಾಜ ಪತ್ತಾರ, ಚಂದ್ರಾಮ ಮೇತ್ರಿ, ಶ್ರೀಶೈಲ ಶಿವೂರ, ರಾಜೇಂದ್ರ ಬಮ್ಮನಳ್ಳಿ ಹಾಗೂ ಸಾವಿರಾರು ಭಕ್ತರು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post a Comment

Whatsapp Button works on Mobile Device only