Clickable Image

Thursday, November 16, 2023

ರೈತ ಉತ್ಪಾದಕರ ಷೇರು ಸಂಗ್ರಹ ಅಭಿಯಾನ :... ಶಹಾಬಾದ : - ತಾಲೂಕಿನಲ್ಲಿ ರೈತ ಉತ್ಪಾದಕರ ಸಂಘ ಅಧಿಕೃತವಾಗಿ ಪ್ರಾರಂಭವಾಗಿರುವುದು ನಮ್ಮೆಲ್ಲರಿಗೂ ಖುಷಿ ತಂದಿರುವ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರು ಈ  ಉತ್ಪಾದಕರ ಸಂಘಕ್ಕೆ ಶೇರುದಾರರಾಗಿ ಈ ಒಕ್ಕೂಟ ಪ್ರಾರಂಭಿಸಲು ಸಹಕಾರಿಯಾಗಬೇಕು ಎಂದು ಜೇವರ್ಗಿ ತಾಲೂಕಿನ ಆಂದೋಲ ಮಠದ ಪೂಜ್ಯರು, ಶ್ರೀ ರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷರಾದ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು. 


ಅವರು ನಗರದಲ್ಲಿ ಶ್ರೀ ಸಾಂಭ ದುರ್ಗೇಶ್ವರಿ ರೈತ ಉತ್ಪಾದಕರ ಸಂಸ್ಥೆ ಶಹಾಬಾದ ವತಿಯಿಂದ ಸಂಘದ ಷೇರು ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. 


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಬುರಗಿ ಲೀಡ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಸದಾಶಿವ ರಾತ್ರಿಕರ್, ನಬಾರ್ಡ್ ನ ಡಿಡಿಎಂ ಲೋಹಿತ್ ಹಾಗೂ ಕೃಷಿ ವಿಜ್ಞಾನಿಗಳಾದ ಪಾಟೀಲ ಮತ್ತು ಎಫ್‌ಪಿಒ ಸಿಇಒ ಶ್ರೀನಿವಾಸ್ ಎನ್ ಹಾಗೂ ಸಂಸ್ಥೆಯ ಅದ್ಯಕ್ಷರಾದ ದಶರಥ ದೇಸಾಯಿ ವೇದಿಕೆ ಮೇಲೆ ಇದ್ದರು. 


ಮಲ್ಲಿಕಾರ್ಜುನ ಇಟಗಿ ಮಾಲಗತ್ತಿ ಇವರು ಸಂಘದಲ್ಲಿ ಪ್ರಥಮ ಸದಸ್ಯತ್ವ ಪಡೆದರು. 


ಎಸ್‌ಬಿಐ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ದೇಶಪಾಂಡೆ, ರವಿ ಬಂಡಾರಿ, ಶಿವರಾಜ್ ಕೋರೆ, ಸಿದ್ದಲಿಂಗ ಡೆಂಗಿ, ಮಹೆಬೂಬ್ ಪಟೇಲ್ ಸೇರಿದಂತೆ ಸುಮಾರು ಅನ್ನದಾತ ರೈತರು ಉಪಸ್ಥಿತರಿದ್ದರು. ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only