Clickable Image

Wednesday, November 22, 2023

ಸಚಿವ ಪ್ರಿಯಾಂಕ ಖರ್ಗೆ ಹುಟ್ಟು ಹಬ್ಬ ಅಭಿಮಾನಿಗಳಿಂದ ಅನ್ನಸಂತರ್ಪಣೆ
 ಶಹಾಬಾದ : - ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಯವರ 45ನೇ ಹುಟ್ಟ ಹಬ್ಬವನ್ನು ಕಾಂಗ್ರೆಸ್ ಪಕ್ಷದಿಂದ ಸರಳವಾಗಿ ಆಚರಿಸಲಾಯಿತು. 


ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಲತೀಫ್ ಪಟೇಲ್ ಕುನ್ನೂರ ಮತ್ತು ರಾಜೇಶ ಯನಗುಂಟಿಕರ ಹಾಗೂ ಸೈಯದ್ ಜಹೀರ್ ಅವರ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದ ಮುಂಬಾಗದಲ್ಲಿ ಬಡ ಮತ್ತು ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡುವದರ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. 


ಕಾರ್ಯಕ್ರಮದಲ್ಲಿ ಬೃಹತ್‌ ಗಾತ್ರದ ಬರ್ತ್‌ ಡೇ ಕೇಕ್‌ ಕತ್ತರಿಸಿ ಬಂದಂತಹ ರೈಲ್ವೆ ಪ್ರಯಾಣಿಕರಿಗೆ ಮತ್ತು ವೃದ್ಧರಿಗೆ ಸಿಹಿ ಹಂಚಿ ಕೈ ಕಲುಕಿ ಸಂತಸ ವ್ಯಕ್ತಪಡಿಸಿದ್ದರು.


ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ಎಮ.ಎ.ರಶೀದ ಕೇಕ್ ಕತ್ತರಿಸಿ ಮಾತನಾಡಿ ಅವರು, ಪ್ರಗತಿಗಾಗಿ ಪ್ರಿಯಾಂಕ್ ಖರ್ಗೆ ಎಂಬ ಹೆಸರಿನಿಂದಲೇ ಹೆಸರುವಾಸಿಯಾಗಿ, ಅವರು ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿಯಾಗಿ ಬೆಳೆದಿದ್ದಾರೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಇಂತಹ ಯುವ ನಾಯಕರು ರಾಜಕಾರಣದಲ್ಲಿ ಹೊರ ಹೊಮ್ಮುತ್ತಿರುವದು ಸಂತೋಷದ ವಿಷಯವಾಗಿದೆ, ಚಿತ್ತಾಪುರ ಕ್ಷೇತ್ರದ ಮತದಾರರು  ಜಿಲ್ಲೆಯ ಅಭಿವೃದ್ಧಿಗೆ ಚಿಂತಿಸುವವರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸರಳ ಸಜ್ಜನಿಕೆಯ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದು ಅವರಿಗೆ ಇಷ್ಟವೂ ಇಲ್ಲ. ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.


ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿಜಯ ಕುಮಾರ ಮುತ್ತಟ್ಟಿ, ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಯುವ ಅಧ್ಯಕ್ಷ ಕಿರಣ ಚಹ್ವಾಣ, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿ, ಶರಣಗೌಡ ಪಾಟೀಲ, ಹಾಷಮ ಖಾನ, ಕುಮಾರ ಚಹ್ವಾಣ, ನಗರ ಸಭೆ ಸದಸ್ಯರಾದ ಡಾ. ಅಹ್ಮದ ಪಟೇಲ, ಇನಾಯತ ಖಾನ, ಫಜಲ್ ಪಟೇಲ, ಶರಣು ಪಗಲಾಪೂರ ಹಾಗೂ ಅನವರ ಪಾಶಾ, ಸಾಹೇಬಗೌಡ ಬೋಗುಂಡಿ, ಶಿವರಾಜ ಕೋರಿ, ಕಿರಣ ಕೋರಿ, ಬಸವರಾಜ ಮಯೂರ, ನಾಗೇಂದ್ರ ನಾಟೇಕಾರ, ಬಾಬಾ ಖಾನ್, ವಸಂತ ಕಾಂಬಳೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only