Clickable Image

Friday, November 10, 2023

ಸಹಕಾರ ಸಂಘಗಳ ಡಿಸಿಎಂ ತರಬೇತಿ ಪ್ರವಾಸ :..
 ಶಹಾಬಾದ :..ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಯ 109 ನೇ ತಂಡದ ಅಭ್ಯರ್ಥಿಗಳ ಪ್ರಾಯೋಗಿಕ ಪ್ರವಾಸದ ನಿಮಿತ್ತವಾಗಿ  ನಗರದ ಓಂ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದರು. ಸದರಿ ಅಭ್ಯರ್ಥಿಗಳಿಗೆ ಪ್ರಾಯೋಗಿಕವಾಗಿ ಕೆಲಸ ಕಾರ್ಯಗಳ ತರಬೇತಿ ನೀಡಲಾಯಿತು. ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮದ್ದರಕಿ, ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ಅರುಣಕುಮಾರ ಹರಸೂರ, ಮಂಜುಳಾ ಬಿರಾದಾರ ರವರು ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿ ಹೇಳಿದರು. 


ಸಂಘದ ನಿರ್ದೇಶಕರಾದ ರೇಷ್ಮಾ ಇಬ್ರಾಹಿಂಪೂರ, ವಿಜಯ ಕಂಠಿಕರ ಹಾಗೂ ತರಬೇತಿಗೆ ಬಂದ ವಿದ್ಯಾರ್ಥಿಗಳು ಇದ್ದರು. 


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only