Clickable Image

Friday, November 17, 2023

ಶಹಾಬಾದ : ಕಡ್ಡಾಯವಾಗಿ ಎಫ್‌.ಐ.ಡಿ ಮತ್ತು ಎನಪಿಸಿಐ ನವೆಂಬರ್ 3೦ ಒಳಗೆ ಮಾಡಿಸಿ :.. ತಹಶೀಲ್ದಾರ್ ಸಂಗಾವಿ.



ಶಹಾಬಾದ : - ರೈತರು ಎಫ್‌ಐಡಿ ನೊಂದಣಿ ಹೊಂದಿದ್ದ ರೈತರಿಗೆ ಮಾತ್ರ ಬರ ಪರಿಹಾರದ ಮೊತ್ತ ಬರಲಿದೆ. ಆದ್ದರಿಂದ ಎಫ್‌ಐಡಿ ನೊಂದಣಿ ಮಾಡುವುದು ಕಡ್ಡಾಯವಾಗಿದೆ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿವಿಧ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ ಅಥವಾ ಅಂಚೆ ಕಛೇರಿಗೆ ತೆರಳಿ ತಮ್ಮ ಬ್ಯಾಂಕ / ಅಂಚೆ ಕಛೇರಿ ಖಾತೆಗೆ ಆಧಾರ ಜೋಡಣೆ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ ನವಂಬರ್ 30ರ ಒಳಗಾಗಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ, ತಪ್ಪಿದ್ದಲ್ಲಿ ತಮ್ಮ ಪಿಂಚಣಿ ತಡೆ ಹಿಡಿಯಲಾಗುವುದು ಅಥವಾ ರದ್ದುಗೊಳಿಸಲಾಗುವುದು ಎಂದು ತಹಶೀಲ್ದಾರ್ ಗುರುರಾಜ ಸಂಗಾವಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. 



ತಾಲೂಕಿನಲ್ಲಿ ಭೂ ಹಿಡುವಳಿದಾರಾದ ಬಹುತೇಕ ರೈತರು ಎಫ್‌ಐಡಿ ನೊಂದಣಿ ಮಾಡಿಸಿಕೊಂಡಿದ್ದಾರೆ ಆದರೆ ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳು ಎಫ್‌ಐಡಿ ಮಾಡಿಸಿ, ಒಂದು ವೇಳೆ ಮಾಡಿಸದಿದ್ದರೆ ರೈತರಿಗೆ ಬರ ಪರಿಹಾರ, ತೊಗರಿ ನೆಟೆರೋಗ ಪರಿಹಾರದ ಮೊತ್ತ ಬರುವುದಿಲ್ಲ. ಏಕೆಂದರೆ ಈ ಹಣ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಎಫ್‌ಐಡಿ ಮಾಡಿಸದ ರೈತರು ತಕ್ಷಣ ಸಮೀಪದ ಸಿಎಸ್‌ಸಿ ಸೆಂಟರ್, ರೈತ ಸಂಪರ್ಕ ಕೇಂದ್ರ ಕಚೇರಿಗೆ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೋಬೈಲ್ ಸಂಖ್ಯೆಯೊಂದಿಗೆ ತೆರಳಿ ಎಫ್‌ಐಡಿ ಮಾಡಿಸಲು ಸೂಚಿಸಿದ್ದಾರೆ, ತಪ್ಪಿದಲ್ಲಿ ಸರಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ವಂಚಿತರಾಗುವಿರಿ ಎಂದು ತಹಶೀಲ್ದಾರ್ ಗುರುರಾಜ ಸಂಗಾವಿ ಅವರು ತಿಳಿಸಿದ್ದಾರೆ. 


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only