Clickable Image

Friday, November 10, 2023

12 ನೆಯ ಶತಮಾನದ ಹಡಪದ ಅಪ್ಪಣ್ಣರನ್ನು ಇಂಡಿಯಲ್ಲಿ ಮರು ಸ್ಥಾಪನೆ — ಯಶವಂತರಾಯಗೌಡ ಪಾಟೀಲ

 ೧೨ ನೆಯ ಶತಮಾನದ ಹಡಪದ ಅಪ್ಪಣ್ಣರನ್ನು ಇಂಡಿಯಲ್ಲಿ ಮರು ಸ್ಥಾಪನೆ — ಯಶವಂತರಾಯಗೌಡ ಪಾಟೀಲ



 ಇಂಡಿ.೧೨ ನೆಯ ಶತಮಾನದ ಸಾಮಾಜಿಕ ಅಂದೋಲನದ ನಾಯಕನಾಗಿದ್ದ ವಚನಕಾರರಲ್ಲಿ ಪ್ರಭಲರಾಗಿದ್ದ ಅಪ್ಪಣ್ಣರನ್ನು ಅಂದು ಪ್ರಮುಖವಾಗಿ ಕಾಣಿಸಿಕೊಂಡರೆ ಇಂದು ಇಂಡಿಯಲ್ಲಿ ಕಂಚಿನ ಮೂರ್ತಿಯ ಮೂಲಕ ಹಡಪದ ಅಪ್ಪಣ್ಣ ಮರು ಸ್ಥಾಪನೆಗೊಂಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಬಣ್ಣಿಸಿದರು.

ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವೃತ್ತದ ಕಂಚಿನ ಮೂರ್ತಿ ಉದ್ಘಾಟನೆ ಮತ್ತು ಪೋಲಿಸ್ ಮೈದಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. 

ಹಡಪದ ಅಪ್ಪಣ್ಣನವರು ಸಮಾಜಕ್ಕೆ ಸಂಸ್ಕಾರ ನೀಡಿದ್ದು ಸರ್ವರನ್ನು ಪ್ರೀತಿಸುವ ಸಮಾಜದ ನಿರ್ಮಾಣದ ಕಲ್ಪನೆ ನೀಡಿದ್ದಾರೆ. ಸಮಾಜ ಬಾಂಧವರು ಶಿಕ್ಷಣ,ಸಂಘಟನೆ ಹೋರಾಟದ ಪರಿಕಲ್ಪನೆಯಲ್ಲಿ ಸಮಾಜವನ್ನು ಮುನ್ನಡೆಸಬೇಕಾಗಿದೆ. ಈಗಾಗಲೇ ಈ ಸಮಾಜ ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಪ್ರಗತೀಶೀಲ ಬ್ಯಾಂಕು ಹೊಂದಿದೆ. ಅದಲ್ಲದೆ ರಾಜ್ಯದಲ್ಲಿಯೇ ಕಂಚಿನ ಮೂರ್ತಿ ಮೂರ್ತಿ ಸ್ಥಾಪಿಸಿದ್ದು ಇಂಡಿಯಲ್ಲಿ ಮಾತ್ರ ಎಂದರು.

ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಮಾತನಾಡಿ ಹಡಪದ ಅಪ್ಪಣ್ಣನವರ ಚಿಂತನೆಗಳನ್ನು ಸಮಾಜದ ಪ್ರತಿಯೊಬ್ಬರೂ ರೂಢಿಸಿಕೊಂಡು ಅವರ ಸ್ಮರಣೆ ಮಾಡುತ್ತ ಪರಸ್ಪರ ಪ್ರತಿಯಿಂದ ಬಾಳುತ್ತ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು. 

ಗುರುದೇವ ಕಾತ್ರಾಳದ ಅಮೃತಾನಂದ ಶ್ರೀಗಳು ಮಾತನಾಡಿ ಪೂಜೆ ಮಾಡಿದರೂ ಕಾಯಕವೇ,ಸಣ್ಣ ಕೆಲಸ ಮಾಡಿದರೂ ಕಾಯಕವೇ. ಅಪ್ಪಣ್ಣ ಸಮಾಜ ವೃದ್ಧರನ್ನು ಸುಂದರವಾಗಿ ಸೇರಿದಂತೆ ಎಲ್ಲರನ್ನೂ ಸುಂದರವಾಗಿ ಕಾಣಲು ಕ್ಷೌರಿಕ ವೃತ್ತಿ ಮಾಡುತ್ತಿದ್ದು, ಅದು ಸಣ್ಣ ಕೆಲಸವಲ್ಲ,ಅವರು ಕಾಯಕತ್ವದಲ್ಲಿ ದೈವತ್ವ ಕಾಣುವರು ಎಂದರು.ಅಪ್ಪಣ್ಣ ಸಮಾಜ ಸಶಕ್ತವಾಗಿ ಬೆಳೆಯಬೇಕಾಗಿದೆ,ಸಮಾಜದ ಯುವಕರು ಈ ಕುರಿತು ಚಿಂತನೆ ಮಾಡಬೇಕಾಗಿದೆ ಎಂದರು. 

ಅಥರ್ಗಾದ ಈಶ ಪ್ರಸಾದ ಶ್ರೀಗಳು,ಇಂಡಿಯ ಸ್ವರೂಪಾನಂದ ಶ್ರೀಗಳು,ಉಪನ್ಯಾಸಕ ಸತ್ಯಪ್ಪ ಹಡಪದ,ಕಲಬುರಗಿ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ,ಕಾಸುಗೌಡ ಬಿರಾದಾರ,ಬಸವರಾಜ ಗೊರನಾಳ,ಧರ್ಮರಾಜ ಮುಜಗೊಂಡ ಮಾತನಾಡಿದರು.

ಇದೇ ವೇಳೆ ಸಮಾಜಕ್ಕೆ ಶ್ರಮಿಸಿದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಸಿದ್ದರಾಯ ಅಪ್ತಾಗಿರಿ, ಸಮಾಜದ ಅಧ್ಯಕ್ಷ ಸಿದ್ದು ನಾವಿ,ಶ್ರೀಮತಿ ಶಕುಂತಲಾ ನಾವಿ,ಸಂತೋಷ ಗವಳಿ,ನಟರಾಜ ಗವಳಿ,ಶಿವಾನಂದ ನಾವಿ,ಅಶೋಕ ಹಡಪದ,ಬಸವರಾಜ ನಾವಿ,ಧೂಳಪ್ಪ ನಾವಿ,ಮತ್ತು ಪುರಸಭೆಯ ಸದಸ್ಯರನ್ನು ವಿವಿಧ ಸಮಾಜದ ಗಣ್ಯರನ್ನು ಸನ್ಮಾನಿಸಿದರು. 

ಸಮಾರಂಭದಲ್ಲಿ ವಿಜಯಪುರದ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಶಿವಶರಣ, ಸಿಂದಗಿಯ ಶಿವಾನಂದ ಹಡಪದ,ನಿಂಗಪ್ಪ ನಾವಿ,ಸೋಲಾಪುರದ ಪಂಡಿತ ಏಳಗಿ, ಭಾರತಿ ನಾವಿ,ಸುನೀಲ ಉಕನಾಳ ಮತ್ತಿತರಿದ್ದರು.  


ಫೋಟೋ-  ಇಂಡಿ ೦೧ 

ಇಂಡಿ ಪಟ್ಟಣದ  ಪೋಲಿಸ್ ಮೈದಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಉದ್ಘಾಟಿಸಿ ಮಾತನಾಡಿದರು.

Post a Comment

Whatsapp Button works on Mobile Device only