ಅಫಜಲ್ಪುರ್: ಪಟ್ಟಣದ ಭೋವಿ ಸಮಾಜದ ಆರಾಧ್ಯ ದೈವ ಶ್ರೀ ವೆಂಕಟೇಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜಿಡಿ ಮಳೆಯಲ್ಲಿಯೂ ಸಡಗರದಿಂದ ಜರುಗಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾರುತಿ ಗಾಡಿವಡ್ಡರ ಹಲವು ವರ್ಷಗಳಿಂದ ಶ್ರೀ ವೆಂಕಟೇಶ್ವರ ಜಾತ್ರೆಯು ಶ್ರಾವಣ ಮಾಸದಲ್ಲಿ ಜರುಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಆರಾಧ್ಯದೈವ ವೆಂಕಟೇಶ್ವರರ ಅಡ್ಡ ಪಲ್ಲಕ್ಕಿ ಉತ್ಸವವು ಪಟ್ಟಣದಲ್ಲಿರುವ ದೇವಸ್ಥಾನದಿಂದ ಭೀಮಾ ನದಿಯ ವರೆಗೆ ಜರುಗಿ ನಂತರ ಗಂಗಸ್ಥಳವಾಗುತ್ತದೆ.ನಂತರ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೂಲ ಸ್ಥಳಕ್ಕೆ ಆಗಮಿಸಿ ಅನ್ನ ಪ್ರಸಾದ ಸೇವೆ ಜರುಗುತ್ತದೆ.ನಂತರ ಭಕ್ತರಿಂದ ಹರಕೆ ಕಾರ್ಯಗಳು ಜರುಗುತ್ತವೆ ಎಂದರು.
ಇದೆ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ತಿಪ್ಪಣ್ಣ ಪೂಜಾರಿ,ತಿಪ್ಪಣ್ಣ ಗಾಡಿವಡ್ಡರ, ವೆಂಕಟೇಶ, ಮಾರುತಿ ಗಾಡಿವಡ್ಡರ, ಪ್ರಮೋದ ಭೋವಿ,ದೇವೆಂದ್ರ,ಹಣಮಂತ,ಹಣಮಂತ ಕಾಳಗಿ,ತಿಮ್ಮಣ್ಣ ಕಾಳಗಿ,ರಾಜು ಗೊಟೆಕಾರ,ರಾಮಣ್ಣ ಗಾಡಿವಡ್ಡರ,ಶಾಂತು ಸೋಮಣ್ಣ, ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
Post a Comment