ಅಫಜಲಪುರ: ತಾಲೂಕಿನಾಧ್ಯಂತ ಕಳೆದ ಹಲವು ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಅವಘಡಗಳು ಆಗಬಹುದು.ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ವಾಸ ಮಾಡಬೇಕು ಎಂದು ತಹಶೀಲ್ದಾರ ಸಂಜುಕುಮಾರ ದಾಸರ ತಾಲೂಕಿನ ಜನರಿಗೆ ತಿಳಿಸಿದ್ದಾರೆ.
ತಾಲೂಕಿನ ಹಲವು ಕಡೆ ಮನೆ ಗೊಡೆಗಳು ಕುಸಿದು ಬಹಳಷ್ಟು ಹಾನಿಗಳಾಗುತ್ತಿವೆ.ಇತ್ತೀಚೆಗೆ ಭೋಸಗಾ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಓರ್ವ ಮಹಿಳೆ ಸಾವನಪ್ಪಿರುವ ಘಟನೆ ಜರುಗಿದೆ.ಅದಕ್ಕಾಗಿ ಹಳ್ಳಿಗಳಲ್ಲಿ ವಾಸಮಾಡುವ ನಾಗರಿಕ ಬಂದುಗಳು ಹಳೆಯ ಮನೆಗಳಲ್ಲಿ ಮಳೆ ನಿಲ್ಲುವವರೆಗೆ ಎಚ್ಚರಿಕೆಯಿಂದ ಇರಬೇಕು.ನದಿ ಪಾತ್ರದ ಹೊಲ ಗದ್ದೆಗಳಲ್ಲಿ ವಾಸ ಮಾಡುವ ರೈತಪಿ ವರ್ಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಸಿದರು.ವಿದ್ಯುತ್ ಕಂಬಗಳಿಗೆ ಯಾರು ಕೂಡಾ ಮುಟ್ಟಬಾರದು.ವಿದ್ಯುತ್ ಪ್ರಸರಿಸುವ ಸಾಧ್ಯತೆಗಳು ಇರುತ್ತವೆ. ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.ಮಳೆ ಹೀಗೆ ಮುಂದುವರೆದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಗಳು ಕೈಗೊಳ್ಳುತ್ತೆವೆ ಎಂದರು.
Post a Comment