Clickable Image

Friday, July 11, 2025

ಗುರು ಪೂರ್ಣಿಮಾ ಮಸ್ಕಿ ಹಿರೇಮಠದಲ್ಲಿ ಗುರು ಶಿಷ್ಯರ ಸಮ್ಮಿಲನ.

 ಮಸ್ಕಿ ಪಟ್ಟಣದ ಹೆಚ್ಚಿನ ಹಿರೇಮಠದಲ್ಲಿ ಗುರುವಂದನ ಕಾರ್ಯಕ್ರಮದಲ್ಲಿ ಮಸ್ಕಿ ಪೂಜ್ಯಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯರಿಗೆ ಗುರು ವಂದನ ಕಾರ್ಯಕ್ರಮ ಸಲ್ಲಿಸಲಾಯಿತು.


ಇದೇ ಸಂದರ್ಭದಲ್ಲಿ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮದ ಬಗ್ಗೆ ಮಸ್ಕಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿದರು.

ಜೀವನದಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು. ಯಾರಿಂದಲೂ ಅಪಹರಿಸಲಾಗದ ವಿದ್ಯೆಯನ್ನು ಧಾರೆ ಎರೆಯುವವರು ಗುರುಗಳು. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ಅನಾದಿ ಕಾಲದಿಂದಲೂ ವಿಶೇಷ ಸ್ಥಾನಮಾನವಿದೆ ಎಂದರು.




ವೇದಕಾಲದಿಂದ ಇಂದಿನವರೆಗೂ ಜ್ಞಾನವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ದಾಟಿಸುತ್ತಾ ಬಂದವರು ಗುರುಗಳು. ಈ ‘ಗುರು ಪೂರ್ಣಿಮೆ’ ಯ ಪುಣ್ಯ ದಿನದಂದು, ನಮ್ಮ ಜೀವನಕ್ಕೆ ಬೆಳಕಾದ ಎಲ್ಲಾ ಗುರುಗಳಿಗೆ ನಮ್ರತೆಯಿಂದ ನಮಿಸೋಣ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಅವರು ಗುರು ವಂದನೆ ಸಲ್ಲಿಸಿ “ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠ’. ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನ ಜ್ಯೋತಿಯನ್ನು ಬೆಳಗಿಸುವ ಗುರು ಪ್ರತ್ಯಕ್ಷ ದೇವರು. ಮೌಲ್ಯವನ್ನು ಬಿತ್ತುವ ಎಲ್ಲಾ ಗುರುಗಳನ್ನು ಸ್ಮರಿಸುವ ಈ ಪುಣ್ಯದಿನದಂದು ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಡಾ. ಬಿ. ಎಚ್. ದಿವಟರ, ಪಂಪಣ್ಣ ಗುಂಡಳ್ಳಿ, ಶಿವಶಂಕ್ರಪ್ಪ ಹಳ್ಳಿ, ಪ್ರಸನ್ನ ಪಾಟೀಲ್, ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷರಾದ ಗೀತಾ ಶಿವರಾಜ್ ಬುಕ್ಕಣ್ಣ, ದೊಡ್ಡಪ್ಪ ಬುಳ್ಳ, ಸಿದ್ದಲಿಂಗಯ್ಯ, ವೆಂಕಟೇಶ್ ನಾಯಕ್, ಸುಗಣ್ಣ ಬಾಳೆಕಾಯಿ, ಮೌನೇಶ್ ನಾಯಕ್, ನಾಗರಾಜ್



ಯoಬಲದ್, ಪುರಸಭೆ ಸದಸ್ಯರಾದ ಸುರೇಶ್ ಅರಸೂರು, ಚೇತನ್ ಪಾಟೀಲ್, ಮಂಜುನಾಥ್ ನಂದ್ಯಾಳ್ ಡಾ. ಸಂತೋಷ್ ಪತ್ತಾರ್, ಡಾ. ನಾಗನಗೌಡ ಸಿದ್ದನಗೌಡ ಉದ್ಬಾಳ್ ಶಾಮಿದ್ ಯಮನಪ್ಪ ಬೋವಿ ಶರಣೇಗೌಡ, ಪೊಲೀಸ್ ಪಾಟೀಲ್, ಮಂಜುನಾಥ ಬ್ಯಾಳಿ, ಚಂದ್ರಕಾಂತ್ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Post a Comment

Whatsapp Button works on Mobile Device only